ಸೋಮವಾರಪೇಟೆ, ಸೆ. 7: ಇಲ್ಲಿನ ಜೇಸಿ ಘಟಕಕ್ಕೆ ವಲಯಾಧ್ಯಕ್ಷ ವಿಕಾಸ್ ಗೂಗ್ಲಿಯಾ ಮತ್ತು ವಲಯ ಉಪಾಧ್ಯಕ್ಷ ದರ್ಶನ್ ಇವರುಗಳು ಭೇಟಿ ನೀಡಿ, ಸೋಮವಾರಪೇಟೆ ಘಟಕದ ವಾರ್ಷಿಕ ಚಟುವಟಿಕೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಾನಿಗೊಳಗಾದ ಸಂತ್ರಸ್ತರಿಗೆ ಕಳಶ ಜೇಸಿ ಸಂಸ್ಥೆಯವರು ಅಗತ್ಯ ಸಾಮಗ್ರಿಗಳನ್ನು ನೀಡಿದ್ದಾರೆ ಎಂದು ಇದೇ ಸಂದರ್ಭ ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಸಂತ್ರಸ್ತರಿಗೆ ಹೆಚ್ಚಿನ ನೆರವು ಒದಗಿಸಲಾಗುವದು ಎಂದರು.
ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೋಮವಾರಪೇಟೆ ಜೇಸಿ ಅಧ್ಯಕ್ಷ ಕೆ.ಎ. ಪ್ರಕಾಶ್, ಕಾರ್ಯದರ್ಶಿ ಎಂ.ಎ. ರುಬೀನಾ, ಜೇಸಿರೇಟ್ಸ್ ಅಧ್ಯಕ್ಷೆ ಮಹೇಶ್ವರಿ ಗಿರೀಶ್ ಉಪಸ್ಥಿತರಿದ್ದರು.