ಕುಶಾಲನಗರ, ಸೆ. 7: ಪ್ರಣವ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ `ಅವಲಕ್ಕಿ ಪವಲಕ್ಕಿ' ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.
ಖ್ಯಾತ ಚಲನಚಿತ್ರ ನಟ ಧ್ರುವ ಸರ್ಜಾ ಮೈಸೂರಿನಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದರು.
ಮೈಸೂರಿನ ರಂಜಿತಾ ಸುಬ್ರಮಣ್ಯ ಮತ್ತು ಗೀತಾ ಪಾಟೀಲ್ ನಿರ್ಮಿಸಿರುವ ಚಲನಚಿತ್ರದಲ್ಲಿ ಜಿಲ್ಲೆಯ ಕುಶಾಲನಗರದ ಯುವ ಕಲಾವಿದರಾದ ಸಿಂಚನಾ ಪೊನ್ನವ್ವ, ಭರತ್ ಬೋಪಣ್ಣ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಚಲನಚಿತ್ರ ನಿರ್ದೇಶಕರಾಗಿ ದುರ್ಗಾಪ್ರಸಾದ್ ಕಾರ್ಯ ನಿರ್ವಹಿಸಿದ್ದಾರೆ.
ಕಾಡು ಜನರ ದೈವ ಭಕ್ತಿಯನ್ನು ಶೋಷಣೆ ಮಾಡುವ ಕಥೆ ಹೊಂದಿರುವ `ಅವಲಕ್ಕಿ ಪವಲಕ್ಕಿ' ಸಿನಿಮಾದ ಚಿತ್ರೀಕರಣ ಹಂತಿಮ ಹಂತದಲ್ಲಿದ್ದು, ಇನ್ನೆರೆಡು ತಿಂಗಳಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕರಾದ ರಂಜಿತಾ ಸುಬ್ರಮಣ್ಯ ತಿಳಿಸಿದ್ದಾರೆ.