ಸೋಮವಾರಪೇಟೆ, ಸೆ. 7: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕ ಕೆ. ಶಿವಾನಂದಪ್ಪ ಅವರ ಪುತ್ರಿ ಎಸ್. ಅಂಜನ ಮತ್ತು ಸ್ನೇಹಿತರು ಉಚಿತವಾಗಿ ಸ್ವೆಟ್ಟರ್‍ಗಳನ್ನು ವಿತರಿಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಸ್. ಸುಂದರ್, ಬಾತ್ಮೀದಾರ ಜಿ.ಎಸ್. ಉದಯಕುಮಾರ್, ಕಾರ್ಯದರ್ಶಿ ಕೆ.ಕೆ. ಗೋಪಾಲ್, ಪೋಷಕ ಸಮಿತಿ ಅಧ್ಯಕ್ಷ ಕೆ.ಟಿ. ಮಧುಕುಮಾರ್, ಮುಖ್ಯ ಶಿಕ್ಷಕಿ ಬಿ.ಟಿ. ರತ್ನಾವತಿ, ಶಿಕ್ಷಕ ಶಿವಾನಂದಪ್ಪ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸ್ವೆಟ್ಟರ್ ನೀಡಿದರು.