ಸೋಮವಾರಪೇಟೆ, ಸೆ. 6: ಮಹಾಮಳೆಯಿಂದ ಸಂತ್ರಸ್ತರಾಗಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥüರಿಗೆ ಸರ್ಕಾರದ ಯೋಜನೆಗಳನ್ನು ತಲಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರೆ ಎಂದು ಆರೋಪಿಸಿ, ಪಿಡಿಓ ಅವರನ್ನು ಕಚೇರಿಯಲ್ಲಿ ಕೂಡಿಹಾಕಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಭರವಸೆ ಮೇರೆ ಹಿಂಪಡೆಯಲಾಗಿದೆ.

ನಿನ್ನೆ ದಿನ ಗರ್ವಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಪಿಡಿಓ ಗಣಪತಿ, ಆಹಾರ ಇಲಾಖೆಯ ನಿರೀಕ್ಷಕ ರಾಜಣ್ಣ, ಪಂಚಾಯಿತಿ ವ್ಯಾಪ್ತಿಯ ಕಂದಾಯ ನಿರೀಕ್ಷಕರನ್ನು ತಕ್ಷಣದಿಂದಲೇ ಅಮಾನತು

ಸೋಮವಾರಪೇಟೆ, ಸೆ. 6: ಮಹಾಮಳೆಯಿಂದ ಸಂತ್ರಸ್ತರಾಗಿರುವ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥüರಿಗೆ ಸರ್ಕಾರದ ಯೋಜನೆಗಳನ್ನು ತಲಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರೆ ಎಂದು ಆರೋಪಿಸಿ, ಪಿಡಿಓ ಅವರನ್ನು ಕಚೇರಿಯಲ್ಲಿ ಕೂಡಿಹಾಕಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಧಿಕಾರಿಗಳ ಭರವಸೆ ಮೇರೆ ಹಿಂಪಡೆಯಲಾಗಿದೆ.

ನಿನ್ನೆ ದಿನ ಗರ್ವಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಪಿಡಿಓ ಗಣಪತಿ, ಆಹಾರ ಇಲಾಖೆಯ ನಿರೀಕ್ಷಕ ರಾಜಣ್ಣ, ಪಂಚಾಯಿತಿ ವ್ಯಾಪ್ತಿಯ ಕಂದಾಯ ನಿರೀಕ್ಷಕರನ್ನು ತಕ್ಷಣದಿಂದಲೇ ಅಮಾನತು ಚೆಕ್ಕನ್ನು ವಿತರಿಸಲಾಗುವದು. ಅಲ್ಲದೆ, ವಿಶೇಷ ಪಡಿತರವನ್ನು ಗ್ರಾಮ ಪಂಚಾಯಿತಿಯ ಎಲ್ಲರಿಗೂ ವಿತರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಗ್ರಾಮಸ್ಥರಾದ ದೊಡ್ಡೇರ ಸುಧಿ, ಗೀಜಿಗಂಡ ರವಿನ್, ಚಂಗಪ್ಪ, ಮೋರ್ಕಂಡ ಸಚಿನ್, ಮಂದೆಯಂಡ ರವಿ, ಮಂದೆಯಂಡ ರಾಮ ಸೇರಿದಂತೆ ಗರ್ವಾಲೆ ಹಾಗೂ ಶಿರಂಗಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಸೇರಿದಂತೆ ಸಿಬ್ಬಂದಿಗಳು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.