ಶ್ರೀಮಂಗಲ, ಸೆ. 6: ಕೊಡಗು ಜಿಲ್ಲೆಯಲ್ಲಿ ಈ ವರ್ಷ ಸಂಭವಿಸಿದ ಮೇಘ ಸ್ಪೋಟದಿಂದಾಗಿ ಕೊಡಗು ಜಿಲ್ಲೆಯಾದ್ಯಂತ ಆಸ್ವಾಭಾವಿಕವಾದ ಮಳೆಯಾಗಿದ್ದು, ಸಂಪೂರ್ಣ ಕೊಡಗು ಜಿಲ್ಲೆಯು ಅತಿವೃಷ್ಟಿಯಿಂದ ತೀವ್ರ ತರವಾದ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದರೂ ಸಹ ಇದುವರೆಗೆ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸದಿರುವದಕ್ಕೆ ಯುಕೊ ಸಂಘಟನೆ ಅಸಮಧಾನ ವ್ಯಕ್ತಪಡಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಸಂಚಾಲಕರಾದ ಕೊಕ್ಕೆಲೆಮಾಡ ಮಂಜು ಚಿಣ್ಣಪ್ಪ ಅವರು ಪ್ರಕೃತಿಯ ಅಸಮತೋಲನದಿಂದಾಗಿ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಮೇಘ ಸ್ಪೋಟದಂತ ಘಟನೆಗಳಿಂದಾಗಿ ಜಿಲ್ಲೆಯಾದ್ಯಂತ ಅಸ್ವಭಾವಿಕವಾಗಿ ಮಳೆಯಾಗಿದ್ದು, ಸಂಪೂರ್ಣ ಕೊಡಗು ಜಿಲ್ಲೆಯು ಅತೀವೃಷ್ಟಿಯ ರುದ್ರನರ್ತನಕ್ಕೆ ತುತ್ತಾಗಿದೆ.

ಮಡಿಕೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಯಿಂದಾಗಿ ಗುಡ್ಡ ಕುಸಿತ ಹಾಗೂ ಬೆಟ್ಟಗಳೇ ಜಾರಿ ಹಲವಾರು ಗ್ರಾಮಗಳೇ ನೆಲ ಸಮವಾಗಿವೆ. ಜನ ವಸತಿ ಪ್ರದೇಶಗಳ ಕುರುಹುಗಳೇ ನಾಶವಾಗಿವೆ. ಹಲವಾರು ಜೀವ ಹಾನಿಯಾಗಿದ್ದು, ರಾತೋರಾತ್ರಿ ಸಹಸ್ರ ಸಂಖ್ಯೆಯಲ್ಲಿ ಜನರು ನಿರ್ವಸತಿಕರು ಹಾಗೂ ನಿರ್ಗತಿಕರಾಗಿದ್ದಾರೆ. ಹಾಗೆಯೇ ಕೊಡಗು ಜಿಲ್ಲೆಯ ಇತರೆ ಸ್ಥಳಗಳಲ್ಲಿ ಗುಡ್ಡ ಕುಸಿತದಂತಹ ಘಟನೆಗಳು ನಡೆಯದಿದ್ದರೂ ಅಸ್ವಭಾವಿಕವಾಗಿ ಸುರಿದ ಮಹಾ ಮಳೆಗೆ ಪ್ರವಾಹ ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳು, ಸಂಪೂರ್ಣ ಬೆಳೆ ನಾಶದಂತಹ ದುರ್ಘಟನೆಗಳು ನಡೆದಿದ್ದರೂ ಸಹ ಇದುವರೆಗೂ ಕೊಡಗು ಜಿಲ್ಲೆಯನ್ನು ಕನಿಷ್ಟ ಅತಿವೃಷ್ಟ ಪೀಡಿತ ಜಿಲ್ಲೆಯೆಂದು ಘೋಷಿಸದಿರುವದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗನ್ನು ಅತಿವೃಷ್ಟಿ ಜಿಲ್ಲೆಯೆಂದು ಘೋಷಿಸದಿದ್ದರೆ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಸಮಗ್ರವಾದ ಪರಿಹಾರವನ್ನು ಒದಗಿಸಲು ಸಾಧ್ಯವಾಗದು ಹಾಗೂ ಕೊಡಗಿನಲ್ಲಿ ಸಂಭವಿಸಿರುವ ದುರ್ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಹ ತೊಡಕಾಗಬಹುದಾದ ಸಾಧ್ಯತೆ ಇರುವದರಿಂದ ತುರ್ತಾಗಿ ಕೊಡಗನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯೆಂದು ಘೋಷಿಸಬೇಕಾಗಿದೆ ಎಂದು ಅವರು ಹೇಳಿದರು. ಆ ಮೂಲಕ ಕೊಡಗಿನ ಕೃಷಿಕರು ಹಾಗೂ ಬೆಳೆಗಾರರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಪಡೆದಿರುವ ಅಲ್ಪಾವಧಿ ಹಾಗೂ ದೀರ್ಘಾವಧಿಯ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಮಂಜು ಚಿಣ್ಣಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ಅಸ್ಥಿತ್ವವನ್ನು ಕಳೆದುಕೊಂಡ ಗ್ರಾಮಗಳ ಪುನರ್ ನಿರ್ಮಾಣವನ್ನು ವ್ಯವಸ್ಥಿತವಾಗಿ

ಗುಡ್ಡ ಕುಸಿತದಂತಹ ಘಟನೆಗಳು ನಡೆಯದಿದ್ದರೂ ಅಸ್ವಭಾವಿಕವಾಗಿ ಸುರಿದ ಮಹಾ ಮಳೆಗೆ ಪ್ರವಾಹ ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳು, ಸಂಪೂರ್ಣ ಬೆಳೆ ನಾಶದಂತಹ ದುರ್ಘಟನೆಗಳು ನಡೆದಿದ್ದರೂ ಸಹ ಇದುವರೆಗೂ ಕೊಡಗು ಜಿಲ್ಲೆಯನ್ನು ಕನಿಷ್ಟ ಅತಿವೃಷ್ಟ ಪೀಡಿತ ಜಿಲ್ಲೆಯೆಂದು ಘೋಷಿಸದಿರುವದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗನ್ನು ಅತಿವೃಷ್ಟಿ ಜಿಲ್ಲೆಯೆಂದು ಘೋಷಿಸದಿದ್ದರೆ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಸಮಗ್ರವಾದ ಪರಿಹಾರವನ್ನು ಒದಗಿಸಲು ಸಾಧ್ಯವಾಗದು ಹಾಗೂ ಕೊಡಗಿನಲ್ಲಿ ಸಂಭವಿಸಿರುವ ದುರ್ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಹ ತೊಡಕಾಗಬಹುದಾದ ಸಾಧ್ಯತೆ ಇರುವದರಿಂದ ತುರ್ತಾಗಿ ಕೊಡಗನ್ನು ಅತಿವೃಷ್ಟಿ ಪೀಡಿತ ಜಿಲ್ಲೆಯೆಂದು ಘೋಷಿಸಬೇಕಾಗಿದೆ ಎಂದು ಅವರು ಹೇಳಿದರು. ಆ ಮೂಲಕ ಕೊಡಗಿನ ಕೃಷಿಕರು ಹಾಗೂ ಬೆಳೆಗಾರರು ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಪಡೆದಿರುವ ಅಲ್ಪಾವಧಿ ಹಾಗೂ ದೀರ್ಘಾವಧಿಯ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಮಂಜು ಚಿಣ್ಣಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ಅಸ್ಥಿತ್ವವನ್ನು ಕಳೆದುಕೊಂಡ ಗ್ರಾಮಗಳ ಪುನರ್ ನಿರ್ಮಾಣವನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವೇ ಇಲ್ಲದಂತಹ ಜಾಗವನ್ನು ಯಾವದೇ ಕಾರಣಕ್ಕೂ ಕಂದಾಯ ಜಮೀನಾಗಿ ಪರಿವರ್ತಿಸದೆ ಅದನ್ನು ಅರಣ್ಯ ಪ್ರದೇಶವೆಂದು ಕಾಯ್ದಿರಿಸಬೇಕೆಂದು ಅಂತಹ ಭೂಮಿಯ ಸಂತ್ರಸ್ತ ಮಾಲೀಕರಿಗೆ ಅಷ್ಟೇ ಅಳತೆಯ ಬದಲಿ ಜಾಗವನ್ನು ಅವರು ಇಚ್ಛಿಸಿದ ಪ್ರದೇಶದಲ್ಲಿ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ವಿಕೋಪಕ್ಕೆ ತುತ್ತಾಗಿರುವ ಗ್ರಾಮಗಳಲ್ಲಿರುವ ಕೊಡವರ ಧಾರ್ಮಿಕ, ಸಾಂಪ್ರದಾಯಿಕ ಹಾಗೂ ಶ್ರದ್ಧಾಕೇಂದ್ರಗಳಾದ ಮಂದ್‍ಮಾನಿ, ಕೈಮಡ, ಐನ್‍ಮನೆ, ದೇವಡಬನ, ಕ್ಯಾಕೋಳ, ಮಚ್ಚಿಣಿ ಕಾಡ್‍ನಂತಹ ಕೇಂದ್ರಗಳನ್ನು ಕೂಡಲೇ ಗುರುತಿಸಿ ಅವುಗಳನ್ನು ಕೂಡಲೇ ಪುನರ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮಂಜು ಚಿಣ್ಣಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನುಸುಳಿ ಕೊಡಗಿನ ಬೆಟ್ಟ, ಗುಡ್ಡಗಳಲ್ಲಿ ಬೃಹತ್ ಕಟ್ಟಡಗಳನ್ನು ನಿರ್ಮಿಸಿ ಪರಿಸರಕ್ಕೆ ಮಾರಕವಾಗದಂತೆ ಕಠಿಣ ಕಾನೂನಿನ ಮೂಲಕ ನಿರ್ಬಂಧಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗೆಯೇ ಯಾವದೇ ಕಾರಣಕ್ಕೂ ಬಹುಪಥಗಳ ಹೆದ್ದಾರಿ ನಿರ್ಮಾಣ, ರೈಲ್ವೆ ಯೋಜನೆ ಹಾಗೂ ಜಲ ವಿದ್ಯುತ್ ಯೋಜನೆಯನ್ನು ಸಂಪೂರ್ಣವಾಗಿ ನಿರ್ಬಂದಿಸಬೇಕೆಂದು ಅವರು ಪ್ರತಿಪಾದಿಸಿದರು.

ಗೋಷ್ಠಿಯಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ ಹಾಗೂ ಗುಡಿಯಂಗಡ ಲಿಖಿನ್ ಬೋಪಣ್ಣ ಹಾಜರಿದ್ದರು.