ನಾಪೆÇೀಕ್ಲು, ಆ. 28: ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಜಲಪ್ರಳಯದ ಹಿನ್ನಲೆಯಲ್ಲಿ ನಾಪೆÇೀಕ್ಲು ವ್ಯಾಪ್ತಿಯಲ್ಲಿ ನಡೆದ ಕೈಲ್ ಮುಹೂರ್ತ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

ಸಂಜೆ 5.30 ಗಂಟೆಗೆ ನಡೆದ ಆಯುಧ ಪೂಜೆಯನ್ನು ಹೊರತುಪಡಿ ಸಿದರೆ ಬೇರೆ ಯಾವದೇ ಸಂಭ್ರಮ ಸಡಗರ ಇರಲಿಲ್ಲ. ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ಎಲ್ಲಾ ಗ್ರಾಮಗಳಲ್ಲಿ ನಡೆಸುವ ಸಾರ್ವಜನಿಕ ಕ್ರೀಡಾ ಕೂಟವನ್ನು ರದ್ದುಗೊಳಿಸಲಾಗಿತ್ತು.