ಗೋಣಿಕೊಪ್ಪ ವರದಿ, ಆ. 28: ಉರುಳಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಚಿರತೆಯನ್ನು ರಕ್ಷಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಮಾಕುಟ್ಟ ಅರಣ್ಯಕ್ಕೆ ಬಿಟ್ಟರು.

ಸುಮಾರು 4 ವರ್ಷ ಪ್ರಾಯದ ಗಂಡು ಚಿರತೆಯು ಹೆಗ್ಗಳ ಗ್ರಾಮದ ನಿರ್ಮಲಗಿರಿ ಪೈಸಾರಿಯಲ್ಲಿ ಬೇಟೆಗೆ ಹಾಕಿದ್ದ ಉರುಳಿಗೆ ಸೆರೆಯಾಗಿತ್ತು. ಹೊಟ್ಟೆಯ ಭಾಗಕ್ಕೆ ಉರುಳು ಸಿಲುಕಿಕೊಂಡು ಚಿರತೆ ಸಾವು-ಬದುಕಿನ ನಡುವೆ ಹೋರಾಡುತ್ತಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ವೀರಾಜಪೇಟೆ ಉಪ ಅರಣ್ಯ ವಿಭಾಗದ ವತಿಯಿಂದ ಕಾರ್ಯಾ ಚರಣೆ ನಡೆಸಿ ಸೆರೆ ಹಿಡಿಯಲಾಯಿತು.

ಮಂಪರು ಔಷಧಿ ನೀಡಿ ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲಾಯಿತು. ಬಲೆಯಲ್ಲಿ ಹಿಡಿದು ಮಾಕುಟ್ಟ ಅರಣ್ಯಕ್ಕೆ ಬಿಡಲಾಯಿತು. ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. ವೈದ್ಯಾಧಿಕಾರಿ ಮುಜಿಬ್ ರೆಹಮಾನ್ ಚಿಕಿತ್ಸೆ ನೀಡಿದರು. ಕಾರ್ಯಾಚರಣೆ ಸಂದÀರ್ಭ ಡಿಸಿಎಫ್ ಕ್ರಿಸ್ತರಾಜ್, ಎಸಿಎಫ್ ರೋಸ್ನಿ, ಆರ್‍ಎಫ್‍ಒ ಗೋಪಾಲ್, ಸಿಬ್ಬಂದಿ ಪೆಮ್ಮುಡಿ ಯಂಡ ಸಂಜು ಸೇರಿದಂತೆ 10 ಮಂದಿ ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ - ಸುದ್ದಿಪುತ್ರ