ವೀರಾಜಪೇಟೆ, ಆ. 27: ಮೀನುಪೇಟೆಯ ಮುತ್ತಪ್ಪ ಕಲಾ ಮಂಟಪದಲ್ಲಿ ಸೆಪ್ಟೆಂಬರ್ 2 ರಂದು 10ನೇ ವರ್ಷದ ಓಣಂ ಹಬ್ಬವನ್ನು ಆಚರಿಸಲಾಗುವದು ಎಂದು ಓಣಂ ಹಬ್ಬದ ಆಚರಣಾ ಸಮಿತಿ ಅಧ್ಯಕ್ಷ ಇ.ಸಿ. ಜೀವನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೀವನ್, ಪ್ರತಿ ವರ್ಷದಂತೆ ಈ ವರ್ಷವು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಸೆ. 2 ರಂದು ಪೂರ್ವಾಹ್ನ 8.30 ಗಂಟೆಗೆ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳಲಿದೆ. 9 ಗಂಟೆಗೆ ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ, 9.30 ಗಂಟೆಗೆ ಮುತ್ತಪ್ಪ ಕಲಾ ಮಂಟಪದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಕಥಕಳಿ ನೃತ್ಯ ಹಾಗೂ ಸಿಂಗಾರಿ ಮೇಳಂ ವಾದ್ಯದೊಂದಿಗೆ ಮಹಾಬಲಿಯ ಮೆರವಣಿಗೆ, 12.30 ಗಂಟೆಗೆ ಓಣಂ ಸದ್ಯ ನಡೆಯಲಿದೆ.

ಅಪರಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಜೆಡಿಎಸ್ ಮುಖಂಡ ಎಸ್.ಹೆಚ್. ಮೊೈನುದ್ದೀನ್, ಹಿಂದು ಮಲೆಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ಕಾಫಿ ಬೆಳೆಗಾರ ಸಿ.ಪಿ. ಪ್ರಕಾಶ್ ಉಪಸ್ಥಿತರಿರುವರು ಎಂದರು

ಕಾರ್ಯದರ್ಶಿ ಸಿ.ಆರ್. ಬಾಬು ಮಾತನಾಡಿ, ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ 8 ಗಂಟೆಯೊಳಗೆ ಬರುವವರಿಗೆ ಮಾತ್ರ ಅವಕಾಶ, ಒಂದು ತಂಡದಲ್ಲಿ ನಾಲ್ಕು ಸದಸ್ಯರು ಮಾತ್ರ ಭಾಗವಹಿಸುವಿಕೆ, 5x5 ಅಡಿ ಚೌಕಟ್ಟಿನೋಳಗೆ ಮಾತ್ರ ರಂಗೋಲಿ ಇರಬೇಕು, ಹೂವುಗಳನ್ನು ಮಾತ್ರ ಉಪಯೋಗಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ವೀರಾಜಪೇಟೆ ಪಟ್ಟಣ ಮತ್ತು ಗ್ರಾಮಾಂತರ ಹಿಂದೂ ಮಲೆಯಾಳಿಗಳಿಗೆ ಮಾತ್ರ ಅವಕಾಶ. ಕಳೆದ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ಹಿಂದೂ ಮಲೆಯಾಳಿ ಮಕ್ಕಳಿಗೆ ಬಹುಮಾನವನ್ನು ನೀಡಲಾಗುವದು. 10ನೇ ವರ್ಷದ ಓಣಂ ಆಚರಣೆಯ ಪ್ರಯುಕ್ತ ಬಡ ಕುಟುಂಬಗಳಿಗೆ ಜಾತಿ-ಮತ, ಬೇಧವಿಲ್ಲದೆ 101 ಓಣಂ ಕಿಟ್‍ಗಳಲ್ಲಿ ವಿತರಿಸಲಾಗುವದು ಎಂದು ಹೇಳಿದರು.

ಉಪಾಧ್ಯಕ್ಷ ಟಿ.ಕೆ. ಪದ್ಮನಾಭ ಮಾತನಾಡಿ, ಸಂಜೆ 7 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಇ.ಸಿ. ಜೀವನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಟಿ.ಕೆ. ಪದ್ಮನಾಭನ್, ಶೀಭಾ ಪ್ರಥ್ವಿನಾಥ್, ಟಿ.ಎಸ್. ಗೋವಿಂದನ್, ಟಿ.ಕೆ. ರಾಜನ್, ಕೃಷ್ಣನ್ ಕುಟ್ಟಿ ಪಿ.ಎಂ. ವಿಜಯನ್, ಪಿ.ಜಿ. ಸುಮೇಶ್, ಟಿ.ಕೆ. ಬಾಲಕೃಷ್ಣನ್ ಭಾಗವಹಿಸಲಿರುವರು.