ಕೂಡಿಗೆ, ಆ. 27: ಕೂಡಿಗೆ ವ್ಯಾಪ್ತಿಯಲ್ಲಿ ಪ್ರತಿವರ್ಷದ ಆಚರಣೆಯ ಪೂಕಳಂ (ತಿರು ಓಣಂ) ಹಬ್ಬವನ್ನು ಅನೇಕ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇರಳ ಶೈಲಿಯ ಉಡುಗೆ ತೊಡುಗೆಗಳನ್ನು ತೊಟ್ಟು ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಆದ ಜಲ ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ.

ಕೂಡಿಗೆಯ ಸುನೀತ ಉಣ್ಣಿಕೃಷ್ಣ ಅವರ ಮನೆಯ ಅಂಗಳದಲ್ಲಿ ಹಬ್ಬದ ಧ್ಯೋತಕವಾಗಿ ಸಾಂಪ್ರದಾಯಕವಾಗಿ ಹೂಗಳ ರಂಗೋಲಿ ಬಿಡಿಸಿ, ಹೊಸ ಉಡುಗೆ ತೊಡುಗೆ ತೊಟ್ಟು ಸಂಭ್ರಮದಿಂದ ಓಣಂ ಆಚರಣೆ ಮಾಡಲಾಯಿತು.