ಮಡಿಕೇರಿ, ಆ. 27: ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಮತ್ತು ಭೌತಿಕ ಅಗತ್ಯತೆಗಳನ್ನು ಗುರುತಿಸಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಆಶಾಯೇನ್ ಫೌಂಡೇಶನ್ ಮೈಸೂರು ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಾನ್ ಬೈಲ್ ನ ಮಕ್ಕಳಿಗೆ ಉಚಿತವಾಗಿ ಸೋಲಾರ್ ಲ್ಯಾಂಪ್‍ಗಳನ್ನು ವಿತರಿಸ ಲಾಯಿತು. ಮಕ್ಕಳ ಕಲಿಕೆಗೆ ವಿದ್ಯುತ್ ಸಮಸ್ಯೆ ತೊಡಕಾಗಬಾರದು ಎಂಬ ಉದ್ದೇಶದಿಂದ ಸೋಲಾರ್ ಲ್ಯಾಂಪ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಆಶಾಯೇನ್ ಫೌಂಡೇಶನ್‍ನ ಕಾರ್ಯಕರ್ತರಾದ ಶರವಣನ್ ಹೇಳಿದರು. ಈ ಸಂದರ್ಭದಲ್ಲಿ ಆಶಾಯೇನ್ ಫೌಂಡೇಶನ್ ನ ಸದಸ್ಯರಾದ ಮಧುರಾಜ್, ಅಶೋಕ್ ಕುಮಾರ್, ಅರವಿಂದ್, ನರೇಂದ್ರ ಮೋರೆ, ಪ್ರದೀಪ್, ಲೋಕೇಶ್, ಜಯಂತಿ ಲೋಕೇಶ್, ಎಸ್‍ಡಿಎಂಸಿ ಅಧ್ಯಕ್ಷೆ ಪ್ರೇಮ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜೇಶ್, ಶಿಕ್ಷಕಿಯರಾದ ಲತಾ ವೆಂಕಟೇಶ್ ಪೈ, ಪಾರ್ವತಿ ಜಿ.ಕೆ. ಉತ್ತಪ್ಪ ಮತ್ತು ಅಡುಗೆ ಸಿಬ್ಬಂದಿಗಳಾದ ನಂದಿನಿ, ನಬೀಸಾ ಹಾಜರಿದ್ದರು.