ಶನಿವಾರಸಂತೆ, ಆ. 27: ಗಾಳಿ - ಮಳೆಗೆ ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯ ಬೆಂಬಳೂರು ಮಾರ್ಗವಾಗಿ ಕೊಡ್ಲಿಪೇಟೆ ಮತ್ತು ಶನಿವಾರಸಂತೆಗೆ ಹೋಗುವ ಜಲ್ಲಿ ರಸ್ತೆ, ಬೆಂಬಳೂರು ಸುಗ್ಗಿಕಟ್ಟೆ, ಈಶ್ವರ ದೇವಸ್ಥಾನದ ಮುಂಭಾಗದ ರಸ್ತೆ ಗುಂಡಿಬಿದ್ದು, ವಾಹನಗಳಾಗಲೀ, ಜನ- ಜಾನುವಾರುಗಳಾಗಲೀ ಹೊಲ -ಗದ್ದೆಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಶಿವರಳ್ಳಿ ಗ್ರಾಮದ ಅಂಗನವಾಡಿ ಕೇಂದ್ರವು ಒಳಭಾಗದಲ್ಲಿ ಬಿರುಕುಬಿಟ್ಟಿದ್ದು, ಮುಂದೆ ಆಗುವ ಅನಾಹುತ ತಪ್ಪಿಸುವಂತೆ ಕೋರಲಾಗಿದೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಪುಟ್ಟರಾಜು, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯರುಗಳಾದ ಬಿ.ಕೆ. ದಿನೇಶ್, ರೇಣುಕಾ ಮೇದಪ್ಪ, ಹೇಮಾವತಿ ಈರಪ್ಪ, ಸಾವಿತ್ರಿ ಕುಮಾರ ಸ್ವಾಮಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.