ಶನಿವಾರಸಂತೆ, ಆ. 27: ಒಡೆಯನಪುರ ಗ್ರಾಮದ ನಿವಾಸಿ ವಿ.ಸಿ. ಗಿರೀಶ್ ಓಣಂ ಹಬ್ಬದಂದು ರಾತ್ರಿ ಒಡೆಯನಪುರ ಗ್ರಾಮದಲ್ಲಿರುವ ತನ್ನ ಅತ್ತೆ ಪಾರ್ವತಿ ಅವರ ಮನೆಗೆ ಹೋಗಿ ಹಬ್ಬದ ಊಟ ಮುಗಿಸಿ ವಾಪಾಸು ಮನೆಗೆ ಬರುತ್ತಿರುವಾಗ, ಅದೇ ಗ್ರಾಮದ ಯತೀಶ್ ಹಾಗೂ ಪ್ರಕಾಶ್ ದಾರಿ ತಡೆದು ಕೊಡಬೇಕಾದ ಹಣವನ್ನು ಏಕೆ ಕೊಡಲಿಲ್ಲ ಎಂದು ಹೇಳಿ ಅವಾಚ್ಯ ಪದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಬಲಗೈ ಕಿರುಬೆರಳಿಗೆ ಚುಚ್ಚಿ ಗಾಯಪಡಿಸಿ, ಹಲ್ಲೆ ನಡೆಸಿರುತ್ತಾರೆ. ಸೋಮವಾರಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.