ನಾಪೋಕ್ಲು, ಆ. 27: ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಿಂಹಮಾಸ ಆರಾಧನೆ ನಡೆಯಿತು. ಉತ್ಸವದ ಅಂಗವಾಗಿ ದೇವರ ಬಲಿ, ತುಲಾಭಾರ ಮತ್ತಿತರ ಸೇವೆಗಳು ನಡೆದವು. ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ತಕ್ಕ ಮುಖ್ಯ ಸ್ಥರು ಹಾಜರಿದ್ದರು. ಸಮೀಪದ ನೆಲಜಿಯ ಇಗ್ಗುತ್ತಪ್ಪ ದೇವಾಲಯದಲ್ಲೂ ಉತ್ಸವ ವಿಜೃಂಭಣೆಯಿಂದ ನಡೆಯಿತು.