ಸೋಮವಾರಪೇಟೆ, ಆ. 25: ಜಲಪ್ರಳಯದಿಂದ ನಿರಾಶ್ರಿತರಾಗಿರುವವರಿಗೆ ಹೊಸಪೇಟೆ ಬಸವ ಬಳಗದಿಂದ ತಾಲೂಕಿನ ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ದೈನಂದಿನ ವಸ್ತುಗಳೊಂದಿಗೆ ಆರ್ಥಿಕ ಸಹಾಯ ಮಾಡಿದರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಸವ ಬಳಗದವರು ಜಿಲ್ಲೆಯ ಹಾನಿಗೊಳಗಾದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಮಾಧಾನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭ ಕೆಲ ಕುಟುಂಬಗಳಿಗೆ ವಸ್ತುಗಳು ಹಾಗೂ ಆರ್ಥಿಕ ಸಹಾಯ ಮಾಡಿದರು. ಬಸವ ಬಳಗದ ಪದಾಧಿಕಾರಿಗಳಾದ ಭದ್ರಾವತಿಯ ಬಸವರಾಜ್ ಹಾಗೂ ಹೊಸಪೇಟೆಯ ಬಸವರಾಜ್ ಕೊಡಗು ಜಿಲ್ಲಾ ವೀರಶೈವ ಮಹಾ ಸಭಾದ ಅಧ್ಯಕ್ಷ ಧರ್ಮಪ್ಪ, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್. ಸುರೇಶ್ ಪ್ರಮುಖರುಗಳಾದ ಪ್ರಸಾದ್, ಶಾಂಭಶಿವಮೂರ್ತಿ, ಉದಯ್ ಕುಮಾರ್, ರಘು, ಶ್ರೀಕಂಠ, ಶಶಿಕುಮಾರ್, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.