ಸೋಮವಾರಪೇಟೆ,ಆ.26: ಕಳೆದ ತಾ. 17ರಂದು ಉಂಟಾದ ಪ್ರವಾಹಕ್ಕೆ ಸಮೀಪದ ಹಟ್ಟಿಹೊಳೆಯಲ್ಲಿ ಸಿಲುಕಿ ಮೃತಪಟ್ಟ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯು ಸಂಬಂಧಿಕರ ದುಃಖಸಾಗರದ ನಡುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಂದು ಹಟ್ಟಿಹೊಳೆಯಲ್ಲಿ ನಡೆಯಿತು.ಕಳೆದ 9 ದಿನಗಳಿಂದ ಹೊಳೆಯ ಮರದ ಬೇರಿಗೆ ಸಿಲುಕಿದ್ದ ಫ್ರಾನ್ಸಿಸ್ ಅವರ ದೇಹ ಗುರುತು ಹಿಡಿಯಲಾರದಷ್ಟು ಬದಲಾಗಿದ್ದು, ಪ್ರಾಥಮಿಕ ವಿಧಿವಿಧಾನಗಳ ನಂತರ ಅಲ್ಲಿನ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.ಮೃತರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ರೂ. 5ಲಕ್ಷ ಮತ್ತು ಅಂತ್ಯ ಸಂಸ್ಕಾರಕ್ಕೆಂದು ರೂ. 3,800 ಮೌಲ್ಯದ ಚೆಕ್‍ನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ಸೋಮವಾರಪೇಟೆ,ಆ.26: ಕಳೆದ ತಾ. 17ರಂದು ಉಂಟಾದ ಪ್ರವಾಹಕ್ಕೆ ಸಮೀಪದ ಹಟ್ಟಿಹೊಳೆಯಲ್ಲಿ ಸಿಲುಕಿ ಮೃತಪಟ್ಟ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯು ಸಂಬಂಧಿಕರ ದುಃಖಸಾಗರದ ನಡುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಂದು ಹಟ್ಟಿಹೊಳೆಯಲ್ಲಿ ನಡೆಯಿತು.
ಕಳೆದ 9 ದಿನಗಳಿಂದ ಹೊಳೆಯ ಮರದ ಬೇರಿಗೆ ಸಿಲುಕಿದ್ದ ಫ್ರಾನ್ಸಿಸ್ ಅವರ ದೇಹ ಗುರುತು ಹಿಡಿಯಲಾರದಷ್ಟು ಬದಲಾಗಿದ್ದು, ಪ್ರಾಥಮಿಕ ವಿಧಿವಿಧಾನಗಳ ನಂತರ ಅಲ್ಲಿನ ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ರೂ. 5ಲಕ್ಷ ಮತ್ತು ಅಂತ್ಯ ಸಂಸ್ಕಾರಕ್ಕೆಂದು ರೂ. 3,800 ಮೌಲ್ಯದ ಚೆಕ್‍ನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು (ಮೊದಲ ಪುಟದಿಂದ) ವಸ್ತುಗಳನ್ನು ತೆಗೆದುಕೊಂಡು ಬರುವದಾಗಿ ತೆರಳಿದವರು ನಂತರ ವಾಪಸ್ ಬಂದಿರಲಿಲ್ಲ.
ತಾ.17ರಂದು ಸುರಿದ ಭಾರೀ ಮಳೆಗೆ ಪ್ರವಾಹ ಸನ್ನಿವೇಶ ಉಂಟಾದ ಹಿನ್ನೆಲೆ ಮನೆ ಮಂದಿಯನ್ನು ಹೊರಗೆ ಕಳುಹಿಸಿದ ಫ್ರಾನ್ಸಿಸ್ ನಂತರ ಮನೆಯ ಹಿಂಭಾಗ ತೆರಳಿದ್ದರು. ಆ ಸಂದರ್ಭ ಭಾರೀ ಶಬ್ಧದೊಂದಿಗೆ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ಮಾತ್ರ ಪತ್ನಿಗೆ ಕಾಣಿಸಿತ್ತು. ನಂತರ ಎಲ್ಲಿ ಏನಾಯಿತು ಎಂಬದೇ ಅರಿಯದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಸ್ಥಳೀಯರು ಫ್ರಾನ್ಸಿಸ್ ಅವರ ಪತ್ನಿ ಫ್ಲೇವಿಯಾ ಅವರನ್ನು ಈರ್ವರು ಮಕ್ಕಳೊಂದಿಗೆ ಸೋಮವಾರಪೇಟೆಯ ಓಎಲ್‍ವಿ ಚರ್ಚ್‍ಗೆ ಕರೆತಂದರು. ಇದರೊಂದಿಗೆ ಮೊನ್ನೆ ದಿನ ರಕ್ಷಣಾ ಸಚಿವರು ಭೇಟಿ ನೀಡಿದ್ದ ಸಂದರ್ಭವೂ ಈ ಬಗ್ಗೆ ಕುಟುಂಬಸ್ಥರು ಪ್ರಸ್ತಾಪಿಸಿ, ಪತ್ತೆ ಕಾರ್ಯ ಮಡುವಂತೆ ಕೋರಿದ್ದರು.
ಫ್ರಾನ್ಸಿಸ್ ಅವರು ಹೊಳೆಯಲ್ಲಿ ಮುಳುಗಿರಬಹುದು ಎಂಬ ಸಂಶಯದಿಂದ ಬೆಂಗಳೂರಿನ ಗರುಡ ಫೋರ್ಸ್ ಪಡೆಯ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಿನ್ನೆ ದಿನ ಸೋಮವಾರಪೇಟೆಯ ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು, ಗರಗಂದೂರು ಮತ್ತು ಹಟ್ಟಿಹೊಳೆ ನಿವಾಸಿಗಳ ಸಹಕಾರದಿಂದ ಹೊಳೆಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮರದ ಬೇರಿಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಗೋಚರವಾಗಿದೆ.
ಸಾರ್ವಜನಿಕ ಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದ ಫ್ರಾನ್ಸಿಸ್ ಪತ್ನಿ ಸೇರಿದಂತೆ 15 ವರ್ಷದ ಫ್ರಾಂಕ್ಲಿನ್ ಮತ್ತು ಫ್ರಾಸ್ಟನ್ ಎಂಬ ಅವಳಿ ಜವಳಿ ಮಕ್ಕಳನ್ನು ಅಗಲಿದ್ದಾರೆ.