ಸುಂಟಿಕೊಪ್ಪ, ಆ. 26: ಪೃಕೃತಿ ವಿಕೋಪದದಿಂದ ನಿರಾಶ್ರಿತರಾದವರಿಗೆ ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸಂತ ಅಂತೋಣಿ ಶಾಲೆ ಮತ್ತು ಖದೀಜ ಉಮ್ಮ ಮದರಸದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ರಾಜ್ಯ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು ಅಲ್ಲದೇ ಪೃಕೃತಿ ವಿಕೋಪದಿಂದ ತೊಂದರೆಗೊಳ ಗಾದವರಿಗೆ ಸರಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ಸಾರಿಗೆ ಸಚಿವರು ಮಾತನಾಡಿ, ನೆರೆಸಂತ್ರಸ್ತ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವದೆಂದರು.

ಸ್ವಾಮೀಜಿಗಳ ಭೇಟಿ: ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ನಿರಾಶ್ರಿತÀ ಕೇಂದ್ರಗಳಿಗೆ ಭೇಟಿ ನೀಡಿ ಹಣ್ಣು ಹಂಪಲುಗಳನ್ನು ವಿತರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ಮಾತನಾಡಿ, ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಮಠದ ವತಿಯಿಂದ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾದ್ಯಮಗಳಲ್ಲಿ ಉಚಿತ ಶಿಕ್ಷಣವನ್ನು ನೀಡುವದಾಗಿ ಹೇಳಿದರಲ್ಲದೇ ನೆಲೆ ಕಳೆದುಕೊಂಡಿರುವವರಿಗೆ ಸರಕಾರ ರೂಪಿಸುವ ಯೋಜನೆಗೆ ಮಠವು ಸಹಭಾಗಿತ್ವ ನೀಡಲಿದೆ. ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ಮಠದ ವತಿಯಿಂದ ನಡೆಸಲಾಗುತ್ತಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವದು ಎಂದರು.