ಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ವಿಪರೀತ ಮಳೆಯ ಪರಿಣಾಮ ಸಾರ್ವಜನಿಕರ ಆಸ್ತಿ ಪಾಸ್ತಿಗಳು ತುಂಬಾ ನಷ್ಟ ವಾಗಿದೆ. ಈ ಅಂಶವನ್ನು ಗಮನಿಸಿ ಇಲಾಖೆಯ ನಿರ್ದೇಶಕರು ನೀಡಿರುವ ನಿರ್ದೇಶನದಂತೆ ಕೊಡಗು ಜಿಲ್ಲೆಯ ಪದವಿ ಪೂರ್ವ ಹಂತದ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಸೇರಿದಂತೆ ಇತರೆ ಶೈಕ್ಷಣಿಕ ಪರಿಕರಗಳು ಮಳೆಯಿಂದ ಹಾನಿಯಾಗಿದ್ದಲ್ಲಿ, ಸಂಬಂಧಿಸಿದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳು ತಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೀರಾ ಅವಶ್ಯಕವಾಗಿರುವ ಪಠ್ಯ ಪುಸ್ತಕಗಳು (ವಿಷಯವಾರು), ನೋಟ್ ಪುಸ್ತಕಗಳು, ಇತರೆ ಶೈಕ್ಷಣಿಕ ಪರಿಕರಗಳ ಅಗತ್ಯವಿದ್ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಕೂಡಲೇ ಮೇಲ್ಕಂಡ ಪರಿಕರಗಳ ಬೇಡಿಕೆಗ¼ ಪಟ್ಟಿಯನ್ನು ಸಲ್ಲಿಸಲು ಮತ್ತು ಪ್ರತಿ ದಿನದ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿ ಮಾಹಿತಿಯನ್ನು ಕಡ್ಡಾಯವಾಗಿ ನೀಡಲು ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿದೇಶಕ ಜಿ. ಕೆಂಚಪ್ಪ ತಿಳಿಸಿದ್ದಾರೆ.