ಮಡಿಕೇರಿ, ಆ. 24: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವಾಗುವದ ರೊಂದಿಗೆ ಇದೇ ಮಳೆಯ ಕಾರಣ ದಿಂದ ಕೆಲಸ ಮಾಡಲಾಗದ ದಿನಕೂಲಿ ಕಾರ್ಮಿಕರ ಕುಟುಂಬ ಗಳಿಗೂ ನೆರವು ನೀಡುವಂತಾಗಬೇಕು ಎಂದು ಜಿಲ್ಲಾ ಜೆ.ಡಿ.ಎಸ್. ಸಂಘಟನಾ ಕಾರ್ಯದರ್ಶಿ ಬಿ.ಎಂ. ಧರ್ಮಪ್ಪ ಜಿಲ್ಲಾಡಳಿತವನ್ನು ಕೋರಿದ್ದಾರೆ.

ಸಂತ್ರಸ್ರರಿಗೆ ನೀಡಲೆಂದು ಹೊರ ಜಿಲ್ಲೆಗಳ ಸಹೃದಯಿಗಳು ಅಗತ್ಯ ಕ್ಕಿಂತಲೂ ಹೆಚ್ಚಾಗಿ ಆಹಾರ ವಸ್ತುಗಳನ್ನು ಜಿಲ್ಲೆಗೆ ಕಳುಹಿಸುತ್ತಿದ್ದು, ಅವುಗಳಲ್ಲಿ ಹೆಚ್ಚಾಗಿರುವದನ್ನು ಕಡು ಬಡವರಿಗೆ ವಿತರಿಸುವಂತಾಗಬೇಕು ಎಂದಿರುವ ಧರ್ಮಪ್ಪ, ಸಂತ್ರಸ್ತರ ಹೆಸರು ಹೇಳಿಕೊಂಡು ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆಯು ತ್ತಿದ್ದು ಅಂತವರ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಹಣ ಸಹಾಯ ಮಾಡುವವರು ಯಾವದೇ ವ್ಯಕ್ತಿಯ ಕೈಗೆ ನೀಡದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆಯೂ ಅವರು ವಿನಂತಿಸಿಕೊಂಡಿದ್ದಾರೆ.