ಸೋಮವಾರಪೇಟೆ, ಆ. 24 : ಪರಿಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬೇಕು ಎಂದು ವೈದ್ಯಾಧಿಕಾರಿ ಡಾ. ಸುವರ್ಣ ಕೃಷ್ಣಾನಂದ್ ಮನವಿ ಮಾಡಿದರು.

ಪ್ರಾಕೃತಿಕ ವಿಕೋಪಕ್ಕೊಳಗಾಗಿ ಪಟ್ಟಣದ ಕೊಡವ ಸಮಾಜದ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ನೂರಾರು ಕುಟುಂಬಗಳಿದ್ದು, ಸ್ವಚ್ಛತೆ ಮತ್ತು ಆರೋಗ್ಯದತ್ತ ಗಮನಹರಿಸಬೇಕು ಎಂದರು.

ಕೇಂದ್ರದಲ್ಲಿ ಡಾ. ಸುಪರ್ಣಾ ನೇತೃತ್ವದ ಉತ್ತಮ ವೈದ್ಯಕೀಯ ತಂಡ ಕಾರ್ಯನಿರ್ವಹಿಸುತ್ತಿದೆ. 24 ಗಂಟೆಗಳ ಕಾಲವೂ ಸಂತ್ರಸ್ತರ ಆರೋಗ್ಯದ ಬಗ್ಗೆ ನಿಗಾವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್ ಮನವಿ ಮಾಡಿದರು.

ಮಕ್ಕಳು ಹಾಗೂ ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಅವರುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಹೊರಗಿನವರ ಕುರಿತು ಜಾಗ್ರತೆ ವಹಿಸಬೇಕೆಂದು ಅವರು ಹೇಳಿದರು.