ಶನಿವಾರಸಂತೆ, ಆ. 22: ಶನಿವಾರಸಂತೆ ವಲಯ ವ್ಯಾಪ್ತಿಯ ಹಾರೋ ಹಳ್ಳಿಯ ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ 2 ಬೀಟೆ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಹಾಗೂ ಸಿಬ್ಬಂದಿ ಧಾಳಿ ನಡೆಸಿ 8 ಲಕ್ಷ ಮೌಲ್ಯದ ಬೀಟೆ ಮರದ ನಾಟಾಗಳ ಸಹಿತ ಮಾರುತಿ ವಾಹನ (ಕೆ.ಎ. 12 ಪಿ. 671) ಹಾಗೂ 2 ಮೋಟಾರ್ ಸೈಕಲ್ (ಕೆ.ಎ. 12 ಹೆಚ್. 3768) (ಕೆ.ಎ. 04 ಇವಿ2700) ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.