ಮಡಿಕೇರಿ, ಆ. 22: ಮಳೆ ಹಾನಿಯಿಂದ ರಸ್ತೆಗಳ ಮೇಲೆ ಬಿದ್ದಿರುವ ಮಣ್ಣನ್ನು ಶೀಘ್ರವಾಗಿ ತೆರವುಗೊಳಿಸಲು ರಾಜ್ಯ ಬೃಹತ್ ನೀರಾವರಿ ಮತ್ತು ಉನ್ನತ ವೈದ್ಯಕೀಯ ಶಿಕ್ಷಣ ಸಚಿವÀ ಡಿ.ಕೆ. ಶಿವಕುಮಾರ್ ಅವರು ಸ್ವಂತ ಖರ್ಚಿನಲ್ಲಿ ಎರಡು ಪ್ರೊಕಾನ್ ಜೆಸಿಬಿ ಯಂತ್ರ ಮತ್ತು ಟಿಪ್ಪರ್‍ಗಳನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಈ ಎರಡು ಯಂತ್ರಗಳ ಮೂಲಕ ಮಡಿಕೇರಿ-ಮಂಗಳೂರು ರಸ್ತೆಯಲ್ಲಿರುವ ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಯಂತ್ರಗಳನ್ನು ಕಾಮಗಾರಿಗಾಗಿ ಹಸ್ತಾಂತರಿಸುವ ಸಂದರ್ಭ ಸಾರಿಗೆ ವಿಭಾಗಾಧಿಕಾರಿ ಪ್ರಭು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೈನ್, ಕಾರ್ಯದರ್ಶಿ ವಿನಯ್ ಕಾರ್ತಿಕ್, ಟಿ.ಪಿ. ರಮೇಶ್ ಡಿಸಿಸಿ ಕಾರ್ಯದರ್ಶಿ ಕೆ.ಕೆ. ಮಂಜುನಾಥ್‍ಕುಮಾರ್, ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್.ಎಸ್. ಚಂದ್ರಮೌಳಿ, ಜಿ.ಪಂ. ಮಾಜಿ ಸದಸ್ಯ ನರಸಿಂಹ ಮೂರ್ತಿ, ಎಂ.ಇ. ಮೊಯ್ದೀನ್ ಹಾಗೂ ಚೇತನ್ ಗೌಡ ಹಾಜರಿದ್ದರು.