ಕುಶಾಲನಗರ, ಆ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯದ ಬಿ ಒಕ್ಕೂಟದ ವತಿಯಿಂದ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ಆವರಣ ಮತ್ತು ಕಾವೇರಿ ನದಿ ತಟದ ಸ್ವಚ್ಛತಾ ಕಾರ್ಯ ನಡೆಯಿತು. ಕ್ಷೇತ್ರದ ಧರ್ಮಾಧಿಕಾರಿ ಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಕಳೆದ 3 ವರ್ಷಗಳಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಯೋಜನೆಯಡಿ ಈ ತಿಂಗಳ 8 ರಿಂದ 14 ರ ತನಕ ಕಾರ್ಯಕ್ರಮ ಜರುಗುತ್ತಿರುವ ಹಿನ್ನೆಲೆಯಲ್ಲಿ ಒಕ್ಕೂಟದ 30ಕ್ಕೂ ಅಧಿಕ ಮಹಿಳೆ ಯರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಯೋಜನೆಯ ಕುಶಾಲನಗರ ಮೇಲ್ವಿಚಾರಕÀ ಹರೀಶ್ ನೇತೃತ್ವದಲ್ಲಿ ಒಕ್ಕೂಟದ ಅಧ್ಯಕ್ಷೆ ಭಾನು ಗುಲ್ಜರ್, ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ, ಕಾರ್ಯದರ್ಶಿ ಗಿರಿಜಾ ಅವರ ತಂಡದ ಮಹಿಳಾ ಸದಸ್ಯರು ದೇವಾಲಯದ ಆವರಣ ಶುಚಿಗೊಳಿಸಿದರು. ಕಾವೇರಿ ನದಿಗೆ ತೆರಳುವ ರಸ್ತೆಯನ್ನು ಸ್ವಚ್ಛ ಗೊಳಿಸಿದ ಒಕ್ಕೂಟದ ಸದಸ್ಯರು ನದಿ ತಟದಲ್ಲಿ ಎಸೆಯಲಾದ ಪ್ಲಾಸ್ಟಿಕ್, ಬಟ್ಟೆ ಮತ್ತಿತರ ವಸ್ತುಗಳನ್ನು ತೆರವುಗೊಳಿಸಿ ದರು. ದೇವಾಲಯದ ಅರ್ಚಕÀ ವಿಷ್ಣುಮೂರ್ತಿ ಭಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಇದ್ದರು.