ಗೋಣಿಕೊಪ್ಪ ವರದಿ, ಆ. 23: ಇಲ್ಲಿನ ಕೂರ್ಗ್ ಪಬ್ಲಿಕ್ ಕಾಲೇಜಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಮರೂರು ಸರ್ಕಾರಿ ಗಿರಿಜನ ಆಶ್ರಮ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡು ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಪೇಪರ್‍ನಲ್ಲಿ ಟೋಪಿ, ಬ್ಯಾಗ್, ಹಡಗು, ದೋಣಿ ಹೀಗೆ ವಿವಿಧ ಪ್ರಾಕಾರಗಳನ್ನು ತೋರಿಸಿಕೊಟ್ಟು, ಅವರಿಂದಲೂ ಕಲಾಕೃತಿ ಮಾಡಿಸಿದರು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಕಾಪ್ಸ್ ಪ್ರಾಂಶುಪಾಲ ಡೆನ್ನಿ ಕುರಿಯಾ ಕೋಸ್, ಶಾಲೆಯ ಸಂಪನ್ಮೂಲ ಶಿಕ್ಷಕ ಶಾಂತೆಯಂಡ ಟೀನಾ ಮಾಚಯ್ಯ, ಚಿತ್ರಕಲಾ ಶಿಕ್ಷಕ ಪಾಟೀಲ್ ಹಾಗೂ ಆಶ್ರಮ ಶಾಲೆಯ ಮುಖ್ಯಶಿಕ್ಷಕ ಸಿದ್ದಲಿಂಗಶೆಟ್ಟಿ, ಸಹ ಶಿಕ್ಷಕ ತಿರುನೆಲ್ಲಿಮಡ ಧನು ಜೀವನ್ ಮತ್ತು ಮೇಚಿಮಂಡ ಪೂವಮ್ಮ ಇತರರು ಪಾಲ್ಗೊಂಡರು.