ಕೂಡಿಗೆ, ಆ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿ ಕೂಡಿಗೆ, ಆ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದಲ್ಲಿ ರೈತರ ಅನುಕೂಲಕ್ಕೆ ಹರಿಸಲಾಗುತ್ತಿದೆ. ಈ ವಿಷಯ ತಿಳಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕುಸಿತಗೊಂಡಿರುವ ಗುಡ್ಡದ ಮಣ್ಣನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ಇಲಾಖೆಯ ಐದು ಹಿಟಾಚಿ ಹಾಗೂ ಜೆಸಿಬಿಗಳು, ಹತ್ತು ಟ್ರ್ಯಾಕ್ಟರ್‍ಗಳಲ್ಲಿ ಮಣ್ಣನ್ನು ತುಂಬಿ ಬೇರೆಗೆ ಕೊಂಡೋಯ್ಯಲಾಗುತ್ತಿದೆ. ಗುಡ್ಡ ಕುಸಿದ ಮಣ್ಣನ್ನು ತೆಗೆಯುತ್ತಿದ್ದಂತೆಯೇ ಗುಡ್ಡದೊಳಗಿನಿಂದ ಜಲ ಉಕ್ಕುತ್ತಿದೆ. ಇದೇ ರೀತಿಯಲ್ಲಿ ಬುಧವಾರ ಬೆಳಗ್ಗಿನ ಜಾವ ನಾಲೆಗೆ ಸಮೀಪವಿರುವ ಮೇಲ್ಗಾಲುವೆಯ 25 ಮೀ. ದೂರದವರೆಗೆ ಗುಡ್ಡದ ರಸ್ತೆಯು ಬಿರುಕುಗೊಂಡಿದೆ.