ಕೂಡಿಗೆ, ಆ. 22: ಹಾರಂಗಿ ಜಲಾಶಯದಿಂದ ನಾಲ್ಕು ಜಿಲ್ಲೆಯ ರೈತರಿಗೆ ನೀರು ಹರಿಸುವ ಮುಖ್ಯ ನಾಲೆಯು ಮದಲಾಪುರ ಸಮೀಪದ ಕಕ್ಕೆಹೊಳೆಗೆ ಅಡ್ಡಲಾಗಿ ಹಾರಂಗಿ ನೀರು ಹರಿಯಲು ನಿರ್ಮಿಸಿರುವ ಮೇಲ್ಗಾಲುವೆ ರಸ್ತೆಯು ಬಿರುಕು ಬಿಟ್ಟಿದೆ. ಈ ಭಾಗದ ರೈತರು ಆತಂಕದಲ್ಲಿದ್ದಾರೆ. ನಾಲೆಗೆ ಹೊಂದಿಕೊಂಡಂತಿರುವ 20 ಅಡಿ ಎತ್ತರದ ಬೆಟ್ಟವು ಸ್ಪಲ್ಪ ಭಾಗ ಕುಸಿದಿದ್ದು, ಕುಸಿದ ಮಣ್ಣು ನಾಲೆಯೊಳಗೆ ಬಿದ್ದಿದೆ. ತುರ್ತಾಗಿ ಸಂಬಂಧಪಟ್ಟವರು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.