ಕೂಡಿಗೆ, ಆ. 22: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿರುವಂತೆ ಧಾರವಾಡ-ಹುಬ್ಬಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುಮಾರು 3000 ಹೊದಿಕೆ ಸಾಮಗ್ರಿಗಳನ್ನು ಪೂರೈಸಲಾಗಿದೆ. ನೆರೆ ಸಂತ್ರಸ್ತರ ಸಹಾಯಕ್ಕೆ ತಮ್ಮ ಅಭಯ ಹಸ್ತ ನೀಡುವದಾಗಿ ಮುಂದೆ ಬಂದಿರುವ ಧಾರವಾಡ-ಹುಬ್ಬಳ್ಳಿ ಯೋಜನೆ ವತಿಯಿಂದ ರೂ. 6 ಲಕ್ಷ ಮೌಲ್ಯದ ಸಾಮಗ್ರಿಗಳು, ಅಕ್ಕಿ, ಬೇಳೆ, ತೆಂಗಿನಕಾಯಿ, ಹಾಲು ಮತ್ತಿತರ ಸಾಮಗ್ರಿಗಳನ್ನು ಎಲ್ಲಾ ಗಂಜಿ ಕೇಂದ್ರಗಳಿಗೆ ವಿತರಿಸಿದ್ದಾರೆ.

ಈ ಸಂದರ್ಭ ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಮಧುಸೂದನ್, ಯೋಜನೆಯ ಜಿಲ್ಲಾ ನಿರ್ದೇಶಕ ಯೋಗಿಶ್, ಯೋಜನಾಧಿಕಾರಿ ಪ್ರಕಾಶ್ ವೈ, ಪಿರಿಯಾಪಟ್ಟಣದ ಯೋಜನಾಧಿಕಾರಿ ರಮೇಶ್, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ಹರೀಶ್ ಕೆ. ಹಾಗೂ ಸೇವಾಪ್ರತಿನಿಧಿಗಳು ಇದ್ದರು.