ವೀರಾಜಪೇಟೆ, ಆ. 23: ಮುಂಡ್ರೋಟು ಅರಣ್ಯ ವಲಯಾಧಿಕಾರಿ ಸಿಬ್ಬಂದಿಗಳು, ಗ್ರಾಮ ಅರಣ್ಯ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವವನ್ನು ಇತ್ತೀಚೆಗೆ ಆಚರಿಸಿತು. ವನಮಹೋತ್ಸವದ ಪ್ರಯುಕ್ತ ಮುಂಡ್ರೋಟು ಅರಣ್ಯದ ಆಯ್ದ ಭಾಗಗಳಲ್ಲಿ ಸಸಿ ನೆಡಲಾಯಿತು. ಈ ಸಂದರ್ಭ ಮುಂಡ್ರೋಟು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಮೋಹನ್, ಕಾಫಿ ಬೆಳೆಗಾರ ಸನ್ನಿ ಮಾತಚ್ಚೇರಿ, ವಲಯಾರಣ್ಯಾಧಿಕಾರಿ ಪ್ರಸನ್ನ, ಸಿಬ್ಬಂದಿಗಳು ಮತ್ತಿತರರು ಹಾಜರಿದ್ದರು.
* ಮಾಕುಟ್ಟ ವಲಯದಲ್ಲಿ ಹೆಗ್ಗಳ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಉಮ್ಮರ್ ಹೆಗ್ಗಳ ಗ್ರಾಮ ಅರಣ್ಯ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಯವರ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.