ಮಡಿಕೇರಿ, ಆ. 23: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ ಪ್ರೊ. ಬಿ.ಎಸ್. ರಾಮನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇವರು ಲಕ್ಷಾಂತರ ವಾಣಿಜ್ಯ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದವರಾಗಿದ್ದು, ವಾಣಿಜ್ಯದ ವಿಷಯಗಳಲ್ಲಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಮೂವತ್ತೈದು ವರ್ಷಗಳ ಕಾಲ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಜುಲೈ 27 ರಂದು ಇವರು ಊಟಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ ಅವರು ಪ್ರೊ. ಬಿ.ಎಸ್. ರಾಮನ್ ಅವರ ಬಗ್ಗೆ ಮಾತನಾಡಿದರು. ಸಂತಾಪ ಸಭೆಯಲ್ಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಪ್ರೌಢಶಾಲಾ ವಿಭಾಗದ ಉಪನ್ಯಾಸಕರು, ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.