ಸಿದ್ದಾಪುರ, ಆ. 23: ವೀರಾಜಪೇಟೆ ತಾಲೂಕು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಸರೋಜಾ ಎಂಬವರ ಮನೆಯಲ್ಲಿ ಯಾಂತ್ರೀಕೃತ ಗದ್ದೆ ನಾಟಿ ಬಗ್ಗೆ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ಕಾರ್ಯಾಗಾರದಲ್ಲಿ ಯೋಜನೆಯ ಕೃಷಿ ಮೇಲ್ವಿಚಾರಕ ಎಂ. ಕುಶಾಲಪ್ಪ ಸಸಿಮಡಿ ತಯಾರಿ, ಗದ್ದೆ ತಯಾರಿ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ಪ್ರದೀಪ್, ಕೃಷಿ ಯಂತ್ರೋಪ ಕರಣದ ಬಾಡಿಗೆ ಕೇಂದ್ರ ವ್ಯವಸ್ಥಾಪಕಿ ರೂಪ, ಸೇವಾ ಪ್ರತಿನಿಧಿ ಇಂದಿರಾ ಹಾಗೂ 35 ಮಂದಿ ರೈತರು ಪಾಲ್ಗೊಂಡಿದ್ದರು.