ಸಿದ್ದಾಪುರ, ಆ. 23: ದೇಶದಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳಲ್ಲಿ ಸಂಸ್ಕಾರವನ್ನುಂಟುಮಾಡುವ ಸಲುವಾಗಿ ಪ್ರತಿಯೊಬ್ಬ ಪೋಷಕರು ದೌರ್ಜನ್ಯ ತಡೆಯಲು ಪ್ರತಿಜ್ಞಾಬದ್ದರಾಗಬೇಕೆಂಬ ಉದ್ದೇಶದಿಂದ ಎಸ್ಎಸ್ಎಫ್ ಕೊಡಗು ವತಿಯಿಂದ ‘ನಮ್ಮ ಮಕ್ಕಳು ನಮ್ಮವರಾಗಲು’ ಎಂಬ ಧ್ಯೇಯವಾಕ್ಯದೊಂದಿಗೆ ಸಿದ್ದಾಪುರ, ನೆಲ್ಲಿಹುದಿಕೇರಿ, ಚೆಟ್ಟಳ್ಳಿಯಲ್ಲಿ ವಾಹನ ಜಾಥಾ ನಡೆಯಿತು.