ಸೋಮವಾರಪೇಟೆ, ಆ. 23: ಆಷಾಡ ಮಾಸದ ಕೊನೆಯ ಶುಕ್ರವಾರದಂದು ಸೋಮೇಶ್ವರ ದೇವಸ್ಥಾನದ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ವಿಶೇಷವಾಗಿ ರಚಿಸಲಾದ ಮಂಡಲಕ್ಕೆ ಪೂಜೆ, ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಅರ್ಚಕ ಪ್ರಸನ್ನ ಕುಮಾರ್, ಶ್ಯಾಮ್ ಪ್ರಸಾದ್ ಪೌರೋಹಿತ್ಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.