ಮಡಿಕೇರಿ, ಆ. 23: ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರಕಾರದ ವತಿಯಿಂದ ಮನೆ ನಿರ್ಮಿಸಿಕೊಡಲಾಗುವದು. ಭಾಗಶಃ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವದರೊಂದಿಗೆ ಕಟ್ಟಡ ನಿರ್ಮಾಣ ಯೋಜನೆಗೆ ಹೊಸ ನೀತಿ ಜಾರಿಗೆ ತರಲು ಸರಕಾರ ಚಿಂತನೆ ನಡೆಸಿದೆಯೆಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಪರಿಸ್ಥಿತಿ ನಿಭಾಯಿಸಲು ಮುಖ್ಯಮಂತ್ರಿಗಳ ಆದೇಶದಂತೆ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಮಾಡಲಾಗಿದ್ದು, ಕೆಲವು ಕಡೆ ನೀರು ಕಡಿಮೆಯಾಗಿದ್ದರೂ ನೆಲೆಸಲು ಸಾಧ್ಯವಿಲ್ಲದಂತಾಗಿದೆ. ಅಂತಹವರಿಗೆ ಅಗತ್ಯ ವಸ್ತುಗಳ ಪೂರೈಕೆ ಹಾಗೂ ಸ್ವಲ್ಪ ಪ್ರಮಾಣದ ಅನುದಾನ ಜಿಲ್ಲಾಡಳಿತದ ಮೂಲಕ ಒದಗಿಸಲು ಸರಕಾರ ಬದ್ಧವಾಗಿದೆ ಎಂದು ಹೇಳಿದರು.
ಬಹುತೇಕ ಮನೆಗಳಿಗೆ ಹಾನಿಯಾಗಿದ್ದು, ಭಾಗಶಃ ಹಾನಿಗೀಡಾದ ಮನೆಗಳಿಗೆ ದುರಸ್ತಿಗೆ ಪರಿಹಾರ ಮೊತ್ತ ನೀಡಲಾಗುವದು. ಕೆಲವೊಂದು ಮನೆಗಳು ಸಂಪೂರ್ಣ ನಾಶವಾಗಿದ್ದು, ಮನೆಕಟ್ಟಲು ಜಾಗವಿದ್ದಲ್ಲಿ ಅಂತಹವರಿಗೆ ಮನೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗುವದು. ಇನ್ನು ಕೆಲವು ಸಂಪೂರ್ಣ ನಾಶಗೊಂಡು ಜಾಗ ಇದ್ದರೂ ಮನೆ ಕಟ್ಟಲು ಸಾಧ್ಯವಾಗದೇ ಇರುವಂತವರಿಗೆ ಬೇರೆ ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಲಾಗುವದು.
(ಮೊದಲ ಪುಟದಿಂದ) ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಕಂದಾಯ ಇಲಾಖೆ ಮೂಲಕ 7 ಗ್ರಾಮಗಳಲ್ಲಿ 42 ಎಕರೆ ನಿವೇಶನ ಗುರುತಿಸಲಾಗಿದೆ. ವಸತಿ ಇಲಾಖೆ ಆಯುಕ್ತರಾದ ಅನ್ಬುಕುಮಾರ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಸಮರ್ಪಕ ಸಮೀಕ್ಷೆಯೊಂದಿಗೆ ಅರ್ಹ ವ್ಯಕ್ತಿಗಳನ್ನು ಗುರುತಿಸಲಿದ್ದಾರೆ ಎಂದು ಹೇಳಿದರು.
ಮಾದರಿ ವಸತಿ: ನಿವೇಶನ ಮತ್ತು ಮನೆ ಯೋಜನೆಯಡಿ ಆಧುನಿಕ ತಂತ್ರಜ್ಞಾನದಡಿ ಈ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿ ಮನೆ ನಿರ್ಮಿಸಲಾಗುವದು. ಗಾಳಿ-ನೀರು ಬಂದರೂ ಹಾನಿಯಾಗದಂತೆ ಆಧುನಿಕ ರೀತಿಯ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೃಹ ನಿರ್ಮಾಣ ಮಂಡಳಿಯ ಇಂಜಿನಿಯರ್ ವಿಭಾಗವನ್ನು ಸ್ಥಾಪನೆ ಮಾಡಲಾಗುವದು. ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ನೂತನ ತಂತ್ರಜ್ಞಾನದೊಂದಿಗೆ ಮಾದರಿ ವಸತಿ
(ಮೊದಲ ಪುಟದಿಂದ) ಈ ಸಂಬಂಧ ಜಿಲ್ಲಾಡಳಿತದ ವತಿಯಿಂದ ಕಂದಾಯ ಇಲಾಖೆ ಮೂಲಕ 7 ಗ್ರಾಮಗಳಲ್ಲಿ 42 ಎಕರೆ ನಿವೇಶನ ಗುರುತಿಸಲಾಗಿದೆ. ವಸತಿ ಇಲಾಖೆ ಆಯುಕ್ತರಾದ ಅನ್ಬುಕುಮಾರ್ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಿದ್ದು, ಸಮರ್ಪಕ ಸಮೀಕ್ಷೆಯೊಂದಿಗೆ ಅರ್ಹ ವ್ಯಕ್ತಿಗಳನ್ನು ಗುರುತಿಸಲಿದ್ದಾರೆ ಎಂದು ಹೇಳಿದರು.
ಮಾದರಿ ವಸತಿ: ನಿವೇಶನ ಮತ್ತು ಮನೆ ಯೋಜನೆಯಡಿ ಆಧುನಿಕ ತಂತ್ರಜ್ಞಾನದಡಿ ಈ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿ ಮನೆ ನಿರ್ಮಿಸಲಾಗುವದು. ಗಾಳಿ-ನೀರು ಬಂದರೂ ಹಾನಿಯಾಗದಂತೆ ಆಧುನಿಕ ರೀತಿಯ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೃಹ ನಿರ್ಮಾಣ ಮಂಡಳಿಯ ಇಂಜಿನಿಯರ್ ವಿಭಾಗವನ್ನು ಸ್ಥಾಪನೆ ಮಾಡಲಾಗುವದು. ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ನೂತನ ತಂತ್ರಜ್ಞಾನದೊಂದಿಗೆ ಮಾದರಿ ವಸತಿ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗ ಬೇಕೆಂಬ ದಿಸೆಯಲ್ಲಿ ಹೊಸ ನೀತಿ ಜಾರಿಗೆ ತರಲು ಚಿಂತನೆ ಹರಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕುಶಾಲನಗರ ನದಿ ತಟದಲ್ಲಿ 16 ಮನೆಗಳಿಗೆ ಹಾನಿಯಾಗಿದ್ದು, ಪುನರ್ ನಿರ್ಮಾಣ ಮಾಡಲು ತೀರ್ಮಾನಿಸ ಲಾಗಿದೆ. ಉಸ್ತುವಾರಿ ಸಚಿವರು, ಶಾಸಕರ ಸಹಕಾರ ಪಡೆದು ಜಿಲ್ಲಾಡಳಿತ ಹಾಗೂ ಪ.ಪಂ. ಮೂಲಕ ಮನೆ ನಿರ್ಮಿಸಲಾಗು ವದೆಂದರು. ಸಂಪಾಜೆ ಕೆಳ ಭಾಗದಲ್ಲಿ 3 ಗ್ರಾಮಗಳಿಗೆ ಹಾನಿಯಾಗಿದೆ. ಕೊಡಗು ಹಾಗೂ ಮಂಗಳೂರು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ಪರಿಹಾರೋಪಾಯ ಕಾರ್ಯ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ವಿಶೇಷಾಧಿಕಾರಿ ಚಾರುಲತಾ ಸೋಮಲ್ ಇನ್ನಿತರರಿದ್ದರು.