ಗೋಣಿಕೊಪ್ಪಲು, ಆ. 21: ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸಂತ್ರಸ್ತÀಗೊಂಡ ಕುಟುಂಬಗಳಿಗೆ ಸಹಾಯವಾಗಲಿ ಎಂಬ ಕಾರಣದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಸಾವಿರ ಹಣವನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅರುವತೋಕ್ಲು ಮೈಸೂರಮ್ಮ ಕಾಲೋನಿಯ ಅನುಗ್ರಹ ಯುವಕ ಸಂಘದ ಮಾಜಿ ಅಧ್ಯಕ್ಷ ಅಶ್ರಫ್ ಅವರು ಪೊನ್ನಂಪೇಟೆಯ ಕಂದಾಯ ಅಧಿಕಾರಿ ರಾಧಕೃಷ್ಣ ಅವರ ಮೂಲಕ ರೂ. 5 ಸಾವಿರ ಚೆಕ್‍ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿದರು.ಇಡೀ ಜಿಲ್ಲೆ ಸಂಕಷ್ಟದಲ್ಲಿರುವಾಗ ಕುಟುಂಬವು ಬಕ್ರೀದ್ ಹಬ್ಬವನ್ನು ಆಚರಿಸುವದು ಸರಿಯಲ್ಲ ಎಂಬ ನಿರ್ಧಾರ ಕೈಗೊಂಡು ಕುಟುಂಬ ಸದಸ್ಯರು ಒಂದು ದಿನದ ಹಬ್ಬಕ್ಕಾಗಿ ಖರ್ಚು ಮಾಡುವ ಹಣವನ್ನು ಸಂತ್ರಸ್ತÀರಿಗೆ ನೆರವಾಗುವ ದೃಷ್ಟಿಯಿಂದ ತಮ್ಮ ವೈಯುಕ್ತಿಕ ಹಣವನ್ನು ಕಳುಹಿಸುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ.