ವೀರಾಜಪೇಟೆ, ಆ. 21: ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಸಹಾಯ ಹಸ್ತ ನೀಡಲು ಅಮ್ಮತ್ತಿ ಕೊಡವ ಸಮಾಜ ತೀರ್ಮಾನಿಸಿದ್ದು, ಪ್ರಥಮ ಹಂತವಾಗಿ ಕೊಡವ ಸಮಾಜದಿಂದ ಪರಿಹಾರ ನಿಧಿಗೆ ರೂ. 1 ಲಕ್ಷ ಪರಿಹಾರ ಧನವನ್ನು ಖಾತೆ ಜಮಾ ಮಾಡಲಾಗಿದೆ ಎಂದು ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ ತಿಳಿಸಿದ್ದಾರೆ.
ಬೆಂಗಳೂರು ಕೊಡವ ಸಮಾಜದಿಂದ ಸಂತ್ರಸ್ತರಿಗೆ ಪರಿಹಾರದ ಸಾಮಗ್ರಿಗಳನ್ನು ಕಳುಹಿಸಲಾಗಿದ್ದು, ಸಂತ್ರಸ್ತರಿಗೆ ವಿತರಿಸಲಾಗುವದು. ಅಮ್ಮತ್ತಿ ಕೊಡವ ಸಮಾಜ ಸ್ವಯಂ ಪ್ರೇರಿತವಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ಖಾತೆಯನ್ನು ತೆರೆದಿರುವದಾಗಿ ಬೋಸ್ ದೇವಯ್ಯ ತಿಳಿಸಿದರು.
ಅಮ್ಮತ್ತಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ನೆಲ್ಲಮಕ್ಕಡ ಸಂಪತ್ ದೇವಯ್ಯ ಮಾತನಾಡಿ, ಸಮಾಜದಿಂದ ಅಮ್ಮತ್ತಿ ಕೆನರಾ ಬ್ಯಾಂಕ್‍ನಲ್ಲಿ ತೆರೆದಿರುವ ಖಾತೆ ಸಂಖ್ಯೆ 0543101013337, ಐ.ಎಫ್‍ಎಸ್‍ಸಿ ಕೋಡ್ ಸಿ.ಎನ್.ಆರ್‍ಬಿ 0000543 ಧನ ಸಹಾಯ ಜಮಾ ಮಾಡುವಂತೆ ಕೋರಿದ್ದಾರೆ. ಈ ಬಾರಿಯ ಕೈಲ್ ಮುಹೂರ್ತ ಹಬ್ಬದ ಆಚರಣೆಯನ್ನು ಕೈ ಬಿಡಲು ತೀರ್ಮಾನಿಸಿರುವದಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬೋಸ್ ದೇವಯ್ಯ ಮೋ 9448052356 ಇಲ್ಲವೇ ಸಂಪತ್ ದೇವಯ್ಯ 9449052230 ಇವರುಗಳನ್ನು ಸಂಪರ್ಕಿಸಬಹುದು.