ಮಡಿಕೇರಿ, ಆ. 21: ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಹಾನಿಯ ಸಂದರ್ಭ ಕೊಡಗಿನ ಜನರ ನೆರವಿಗೆ ಧಾವಿಸಿದ ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಆಹಾರ ಪದಾರ್ಥಗಳು, ಉಡುಗೆಗಳು, ನೀರು, ಹಾಲು ಮತ್ತು ಹೊದಿಕೆಗಳನ್ನು ನೀಡಿ ಸಹಕರಿಸುತ್ತಿವೆ.

ಮಡಿಕೇರಿ ತಾಲೂಕಿನಲ್ಲಿ 3, ವೀರಾಜಪೇಟೆ ತಾಲೂಕಿನಲ್ಲಿ 1, ಕುಶಾಲನಗರದಲ್ಲಿ 1 ಸಂಗ್ರಹಣಾ ಕೇಂದ್ರಗಳಲ್ಲಿ ದಾಸ್ತಾನು ಸಂಗ್ರಹಿಸಲಾಗಿದ್ದು, ಮಳೆ ಹಾನಿಯಿಂದ ಸಂತ್ರಸ್ತರಿಗೆ ಆಹಾರ ಹಾಗೂ ಇತರ ಪದಾರ್ಥಗಳನ್ನು ಗ್ರಾಮ ಪಂಚಾಯಿತಿಗಳು ಮತ್ತು ನಗರಸಭೆ ಮೂಲಕ ಪೂರೈಸಲಾಗುತ್ತಿದೆ. ಅವಶ್ಯಕತೆಗಳಿದ್ದಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.