ನಾಪೋಕ್ಲು, ಆ. 20: ಈ ವರ್ಷದ ಗಣೇಶ ಚತುರ್ಥಿ ಹಬ್ಬದ ಉತ್ಸವವನ್ನು ಸರಳವಾಗಿ ಆಚರಿಸಲು ನಾಪೋಕ್ಲು ನಾಡಿನ 5 ಉತ್ಸವ ಸಮಿತಿಯವರು ತೀರ್ಮಾನಿಸಿದ್ದಾರೆ. ಸೆ. 13 ರಂದು ಬೆಳಿಗ್ಗೆ 9 ಗಂಟೆಗೆ ಪ್ರತಿಷ್ಠಾಪನೆ ಅದೇ ದಿನ ಸಂಜೆ 5 ಗಂಟೆಗೆ ಕಾವೇರಿ ನದಿಯಲ್ಲಿ ವಿಸರ್ಜನೆ. ಮೆರವಣಿಗೆಯಲ್ಲಿ ಯಾವದೇ ರೀತಿಯ ತೇರಿನ ಅಲಂಕಾರ ಮತ್ತು ಡಿಜೆ ವಾದ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವದಿಲ್ಲ. ಇದರಲ್ಲಿ ಉಳಿಯುವ ಹಣವನ್ನು ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವು ನೀಡಲು ತೀರ್ಮಾನಿಸಲಾಗಿದೆ.