ನಾಪೆÇೀಕ್ಲು, ಆ. 20: ನಾಪೆÇೀಕ್ಲು ವ್ಯಾಪ್ತಿಯಲ್ಲಿ ತಾ. 19 ರಿಂದ ಮಳೆಯ ರಭಸ ಕಡಿಮೆಯಾಗಿದೆ. ಸೋಮವಾರ ಹಗಲು ಅಲ್ಪಸ್ವಲ್ಪ ಮಳೆ ಹಾಗೂ ಬಿಸಿಲಿನ ಪರಿಣಾಮ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ನಾಪೆÇೀಕ್ಲು ಮಡಿಕೇರಿ ರಸ್ತೆಯ ಕೊಟ್ಟಮುಡಿಯಲ್ಲಿ ಕಾವೇರಿ ನದಿ ಪ್ರವಾಹ ಇಳಿಮುಖವಾಗಿದ್ದು, ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ನಾಪೆÇೀಕ್ಲು – ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ಕಾವೇರಿ ನದಿ ಪ್ರವಾಹ ಕಳೆದ 8 ದಿನಗಳಿಂದ ಮುಂದುವರೆದಿದೆ. ಉಳಿದಂತೆ ಯಾವದೇ ರಸ್ತೆ ಸಂಚಾರ ಸ್ಥಗಿತಗೊಂಡ ಬಗ್ಗೆ ವರದಿಯಾಗಿಲ್ಲ.

ಓಡಾಡದ ಬಸ್‍ಗಳು: ರಸ್ತೆ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಸುಗಳ ಓಡಾಟ ಬಹುತೇಕ ಸ್ಥಗಿತಗೊಂಡಿದೆ. ಒಂದೆರಡು ಬಸ್ಸುಗಳು ವೀರಾಜಪೇಟೆ-ಕಕ್ಕಬ್ಬೆ ಮಾರ್ಗವಾಗಿ ನಾಪೆÇೀಕ್ಲುವಿಗೆ ಬಂದು ಮರಳುತ್ತಿವೆ. ಜಿಲ್ಲಾ ಕೇಂದ್ರ ಮಡಿಕೇರಿಗೆ ಇನ್ನೂ ಬಸ್ ಸಂಚಾರ ಆರಂಭಗೊಂಡಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಬರೆ ಕುಸಿತವಾಗಿರುವದು ಬಿಟ್ಟರೆ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.