ಕೂಡಿಗೆ, ಆ. 20: ಕುಶಾಲನಗರದಿಂದ ಕೂಡಿಗೆ ಕಡೆಗೆ ಬರುತ್ತಿದ ಟ್ರ್ಯಾಕ್ಟರ್ ಅವಘಡಕ್ಕೀಡಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೇಶ್ (48) ಮೃತ ವ್ಯಕ್ತಿ ಟ್ರ್ಯಾಕ್ಟರ್ ಡ್ರೈವರ್ ಗಣೇಶ್ ಎಂಬಾತನ ಪಕ್ಕದಲ್ಲಿ ಕುಳಿತು ತೆರಳುತ್ತಿದ್ದ ಟ್ರ್ಯಾಕ್ಟರ್ ರಸ್ತೆ ಉಬ್ಬು ದಾಟುವ ಸಂದರ್ಭ ಬಿದ್ದು ಟ್ರ್ಯಾಕ್ಟರ್ನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ರಾಜೇಶ್ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.