ಮಡಿಕೇರಿ, ಆ. 15: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸರಾಸರಿ 4.53 ಇಂಚಿನಷ್ಟು ಭಾರೀ ಮಳೆಯಾಗಿದೆ. ಕಳೆದ ವರ್ಷ ಈ ದಿನದಂದು ಕೇವಲ ಮಳೆಯ ಸಿಂಚನ ಮಾತ್ರವಾಗಿತ್ತು.

ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ಸರಾಸರಿ 128.44 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ 54.82 ಇಂಚಿನಷ್ಟು ಮಾತ್ರ ಮಳೆ ಸುರಿದಿತ್ತು.

ತಾಲೂಕುವಾರು ವಿವರ: ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 7.50 ಇಂಚು, ಜನವರಿಯಿಂದ ಈ ತನಕ 181 ಇಂಚು ಹಾಗೂ ಕಳೆದ ವರ್ಷ ಈ ಅವಧಿಯಲ್ಲಿ 78 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ 24 ಗಂಟೆಗಳಲ್ಲಿ ಸರಾಸರಿ 3.27 ಇಂಚು, ಜನವರಿಯಿಂದ ಈತನಕ 100 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 44.18 ಇಂಚು ಮಳೆ ಸುರಿದಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ 24 ಗಂಟೆಯಲ್ಲಿ ಸರಾಸರಿ 2.82 ಇಂಚು ಜನವರಿಯಿಂದ ಈತನಕ 103.32 ಇಂಚು ಹಾಗೂ ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 41.87 ಇಂಚು ಮಳೆ ದಾಖಲಾಗಿತ್ತು.

ಹೋಬಳಿವಾರು ಮಾಹಿತಿ: ಭಾಗಮಂಡಲಕ್ಕೆ 10 ಇಂಚು

ಕಳೆದ 24 ಗಂಟೆಯಲ್ಲಿ ಭಾಗಮಂಡಲ ಹೋಬಳಿಯಲ್ಲಿ 10 ಇಂಚಿನಷ್ಟು ಭಾರೀ ಮಳೆಯಾಗಿದೆ. ಉಳಿದಂತೆ ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯಲ್ಲಿ 8.25 ಇಂಚು, ನಾಪೋಕ್ಲು 5.52 ಇಂಚು, ಸಂಪಾಜೆಗೆ 6.26 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯಲ್ಲಿ 3.71 ಇಂಚು, ಹುದಿಕೇರಿ 4.32, ಶ್ರೀಮಂಗಲ 4.23, ಪೊನ್ನಂಪೇಟೆ 2.34, ಅಮ್ಮತ್ತಿ 3.68, ಬಾಳೆಲೆಗೆ 1.38 ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಹೋಬಳಿಯಲ್ಲಿ 2.79, ಶನಿವಾರಸಂತೆ 1.89, ಶಾಂತಳ್ಳಿ 6.40 ಇಂಚು, ಕೊಡ್ಲಿಪೇಟೆ 0.96, ಕುಶಾಲನಗರ 1.41, ಸುಂಟಿಕೊಪ್ಪ 3.45 ಇಂಚು ಮಳೆಯಾಗಿದೆ.