ಸೋಮವಾರಪೇಟೆ, ಆ. 15: ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ತಪ್ಪಿದ ಆಡಳಿತ ಕಂಡುಬರುತ್ತಿದೆ. ಮಳೆಗಾಲದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣಕ್ಕೆ ಮಾಹಿತಿ ನೀಡಲು ಅಳವಡಿಸಲಾಗಿರುವ ದೂರವಾಣಿ ಕೆಟ್ಟು ಕೂತಿದೆ.
ವಾಕಿಟಾಕಿ ಅಳವಡಿಸಿರುವ ಕೊಠಡಿಯಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಕಿಟಕಿಯಿಂದ ನೇರವಾಗಿ ಮಳೆ ನೀರು ವಾಕಿಟಾಕಿಯ ಮೇಲೆ ಬೀಳುತ್ತಿದೆ.ಕನಿಷ್ಟ ಒಂದೆರಡು ಸಾವಿರ ವ್ಯಯಿಸಿ ಕಿಟಕಿಗೆ ಗಾಜು ಅಳವಡಿಸಲೂ ಸಹ ಅಸಾಧ್ಯವಾಗಿರುವಂತಹ ಸ್ಥಿತಿ ತಾಲೂಕು ಆಡಳಿತಕ್ಕೆ ಒದಗಿದೆ.
- ವಿಜಯ್ ಹಾನಗಲ್