ಮಡಿಕೇರಿ, ಆ. 15: ಮಡಿಕೇರಿಯ ಅಪಾಯಕಾರಿ ಸ್ಥಳಗಳಲ್ಲಿ ಒಂದಾದ ಇಂದಿರಾನಗರ ವಿಭಾಗದಲ್ಲಿ ರಸ್ತೆ ಕುಸಿತ, ಬರೆ ಜರಿದಿರುವದು ಸೇರಿದಂತೆ ಸುಮಾರು ಮನೆಗಳು ಜಖಂಗೊಂಡಿರುವ ಘಟನೆ ನಡೆದಿದೆ.
ಬರೆಜರಿದ ಪರಿಣಾಮ ಹಲವು ಮನೆಗಳ ಮೇಲೆ ಮಣ್ಣು ಬಿದ್ದು ಅನಾಹುತ ಸಂಭವಿಸಿದೆ. ರಸ್ತೆಯೂ ಅಪಾಯಕಾರಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ ಅವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.