ಗೋಣಿಕೊಪ್ಪ ವರದಿ, ಆ. 15 : ಮಳೆಯ ಪ್ರಮಾಣ ಹೆಚ್ಚಾಗಿರುವದರಿಂದ ನಿಟ್ಟೂರು ಲಕ್ಷ್ಮಣತೀರ್ಥ ನದಿ ಅಪಾಯದ ಮಟ್ಟದಲ್ಲಿದೆ. ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು, ಯಾವ ಸಂದರ್ಭದಲ್ಲಾದರೂ ಉಕ್ಕಿ ಹರಿಯುವ ಸಾಧ್ಯತೆ ಇದೆ.

ಈಗಾಗಲೇ ರಸ್ತೆಯ ಮೇಲ್ಭಾಗದ ಮಟ್ಟಕ್ಕೆ ನೀರು ತುಂಬಿದೆ. ಶ್ರೀಮಂಗಲ ವ್ಯಾಪ್ತಿಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಅದೇ ಮಾರ್ಗವಾಗಿ ಹರಿದು ಬರುವ ನೀರಿನಿಂದ ಉಕ್ಕುವ ಸಾಧ್ಯತೆ ಹೆಚ್ಚಿದೆ.