ನಾಪೋಕ್ಲು, ಆ. 14: ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿ ಯುವ ವೇದಿಕೆಯ ಸದಸ್ಯರು ಗ್ರಾಮಸ್ಥರು ಕುಟುಂಬವೊಂದರ ಬೆನ್ನೆಲುಬಾಗಿ ಮಾನವೀಯತೆ ಮೆರೆದಿದ್ದಾರೆ
ಇಲ್ಲಿಗೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪಘಾತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇವರಿಗೆ ಸೇರಿದ ಐದು ಏಕ್ರೆ ಗದ್ದೆಯನ್ನು ಗ್ರಾಮಸ್ಥರು ನಾಟಿ ಕಾರ್ಯ ಮಾಡಿ ಮಾನವಿಯತೆ ಮೆರೆದು ಸಾಮಾಜಕ್ಕೆ ಮಾದರಿಯಾಗಿದ್ದಾರೆ. 40-45 ಜನ ಗ್ರಾಮಸ್ಥರು ಒಗ್ಗೂಡಿ ಸುಮಾರು 5 ಏಕರೆ ವ್ಯಾಪ್ತಿಯ ಗದ್ದೆಯಲ್ಲಿ ನಾಟಿ ಮಾಡಿ ಕುಟುಂಬವೊಂದರ ಬೆನ್ನೆಲುಬಾಗಿ ನರಿಯಂದಡ ಗ್ರಾಮದ ಸಂಘಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರೇ ಈ ಜನಪರ ಕೆಲಸ ನಿರ್ವಹಿಸಿದವರು. ಗ್ರಾಮದ ಗೌಡ ಯುವ ವೇದಿಕೆ ಹಾಗೂ ಗ್ರಾಮಸ್ಥರು ಒಗ್ಗೂಡಿ ನಾಟಿ ಕೆಲಸ ಮಾಡಿ ಕುಟುಂಬವೊಂದರ ಆಸರೆಯಾಗಿ ನಿಂತಿದ್ದಾರೆ.
ನರಿಯಂದಡ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ತೋಟಂಬೈಲ್ ಅನಂತಕುಮಾರ್ ಅವರ ಗದ್ದೆಯನ್ನು ನಾಟಿ ಮಾಡಿ ಗ್ರಾಮಸ್ಥರು ಸೈ ಎನಿಸಿಕೊಂಡಿದ್ದು, ಇತ್ತೀಚೆಗೆ ಇವರು ಕುಟುಂಬ ಸಮೇತ ಸಕಲೇಶಪುರದಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತಕ್ಕೆ ಈಡಾಗಿದ್ದರು. ಪತ್ನಿ ರೇಖಾ, ತಂಗಿ ಜ್ಯೋತಿ ಮತ್ತು ಅತ್ತೆ ರೋಹಿಣಿ ಸೇರಿದಂತೆ ನಾಲ್ವರು ಅಪಘಾತದಿಂದ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಐದು ಎಕ್ರೆ ಗದ್ದೆಯನ್ನು ನಾಟಿ ಮಾಡುವ ಮೂಲಕ ಗೌಡ ಯುವ ವೇದಿಕೆಯ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.