ಮಡಿಕೇರಿ, ಆ. 14: ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ನೂತನ ಅಧ್ಯಕ್ಷ ಬಾಚರಣಿಯಂಡ ಪಿ. ಸುಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ರೂ. 11 ಲಕ್ಷ 28 ಸಾವಿರದಷ್ಟು ಲಾಭಗಳಿಸಿದ್ದು, ಶೇ. 9 ಡಿವಿಂಡೆಂಡನ್ನು ಸಂಘದ ಸದಸ್ಯರಿಗೆ ವಿತರಣೆ ಮಾಡುವಂತೆ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಾಚರಣಿಯಂಡ ಪಿ. ಸುಮನ್ ಮಾತನಾಡಿ, ಸಂಘ ರೂ. 2 ಕೋಟಿ 90 ಲಕ್ಷದಷ್ಟು ಠೇವಣಿಯನ್ನು ಸಂಗ್ರಹಿಸಿದ್ದು, ಅಂದಾಜು ರೂ. 6 ಕೋಟಿಯಷ್ಟು ಕೆ.ಸಿ.ಸಿ. ಫಸಲು ಸಾಲವನ್ನು ವಿತರಣೆ ಮಾಡಿದೆ. ರೂ. 1 ಕೋಟಿ 27 ಲಕ್ಷದಷ್ಟು ಫಸಲು ಸಾಲವನ್ನು ಸ್ವಂತ ಬಂಡವಾಳದಿಂದ ಸಂಘವು ವಿತರಣೆ ಮಾಡಿದ್ದು, ರೂ. 1 ಕೋಟಿ 76 ಲಕ್ಷದಷ್ಟು ಚಿನ್ನಾಭರಣ ಸಾಲವನ್ನು ನೀಡಿದ್ದು, ಸಂಘದಿಂದ ಸದಸ್ಯರಿಗೆ ಗೊಬ್ಬರ ಖರೀದಿ ಸಾಲ, ಪಿಗ್ಮಿ ಸಾಲವನ್ನು ವಿತರಣೆ ಮಾಡುತ್ತಿದ್ದು, ಸಂಘದ ಸದಸ್ಯರಿಗೆ ಗೊಬ್ಬರ ಖರೀದಿ ಸಾಲ ಪಿಗ್ಮಿ ಸಾಲವನ್ನು ವಿತರಣೆ ಮಾಡುತ್ತಿದ್ದು, ಸಂಘದ ಸದಸ್ಯರಿಗೆ ಇದರ ಉಪಯೋಗ ಪಡೆಯುವಂತೆ ಸಭೆಯಲ್ಲಿ ತಿಳಿಸಿದರು.
ಸಂಘದ ಉಪಾಧ್ಯಕ್ಷ ಪೊಡನೋಳನ ಟಿ. ಶ್ರೀನಿವಾಸ್ ಸ್ವಾಗತಿಸಿ, ಸಂಘದ ನಿರ್ದೇಶಕ ಮುಕ್ಕಾಟಿರ ನಾಣಯ್ಯ ವಂದಿಸಿದರು.