ಗೋಣಿಕೊಪ್ಪ ವರದಿ, ಆ. 14: ಇಲ್ಲಿನ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಉಚ್ಚರಣೆ, ಕಿವುಡುತನ ಹಾಗೂ ಕಣ್ಣಿಗೆ ಸಂಬಂದಿಸಿದ ರೋಗಗಳ ಉಚಿತ ತಪಾಸಣೆ ಶಿಬಿರ ನಡೆಯಿತು. ನೂರಾರು ವಿದ್ಯಾರ್ಥಿಗಳು ತಪಾಸಣೆ ಮಾಡಿಸಿಕೊಂಡರು.

ಮೈಸೂರು ಸೌಂಡ್ ಟ್ರೀ ಆಸ್ಪತ್ರೆಯ ಆಡಿಯೋಲಾಜಿಸ್ಟ್‍ಗಳಾದ ಪಿ. ಸಿ. ದೇವಯ್ಯ, ಎಸ್. ಎಂ. ಗುಣಸಾಗರ್, ಮೋನಿಕಾ ರತ್ನಮಾಲಾ ಹಾಗೂ ಅಕ್ಷಯ್ ತಪಾಸಣೆ ನಡೆಸಿದರು.

ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಮರಣ್ ಶುಭಾಶ್, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಾರುವಂಗಡ ಬೋಸ್ ಪೆಮ್ಮಯ್ಯ, ಜಿಲ್ಲಾ ಸಂಪರ್ಕ ಅಧಿಕಾರಿ ಪಟ್ಟಡ ಧನು ಉತ್ತಯ್ಯ ಉಪಸ್ಥಿತರಿದ್ದರು.