ಕುಶಾಲನಗರ, ಆ. 14: ವಿಶ್ವ ಆನೆ ದಿನಾಚರಣೆ ಅಂಗವಾಗಿ ಸ್ಥಳೀಯ ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ಆನೆಕಾಡು ಶಿಬಿರದಲ್ಲಿ ಗಾಯಗೊಂಡು ಆರೈಕೆ ಪಡೆಯುತ್ತಿರುವ ಕುಂಟಾನೆಗೆ ಆಹಾರ ನೀಡುವ ಮೂಲಕ ಆಚರಿಸಲಾಯಿತು.
ಬಳಗದ ಪ್ರಮುಖರಾದ ಡಿ.ಆರ್. ಸೋಮಶೇಖರ್ ನೇತೃತ್ವದಲ್ಲಿ ಆನೆಗೆ ಹಲಸು, ಬಾಳೆ ಮತ್ತಿತರ ಆಹಾರ ನೀಡಲಾಯಿತು. ಇದೇ ಸಂದರ್ಭ ಸಾಕಾನೆಗಳಾದ ವಿಜಯ, ಹರ್ಷ ಆನೆಗಳಿಗೂ ಉಪಚರಿಸಲಾಯಿತು.
ಈ ಸಂದರ್ಭ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಕೆ.ಬಿ. ಚಂದ್ರು, ಪೂಣಚ್ಚ, ಕಿರಣ್, ಸಂಜು, ಮಾವುತ ಚಿಕ್ಕ, ಬಳಗದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ವಿ.ಡಿ. ಪುಂಡರೀಕಾಕ್ಷ, ಕೆ.ಆರ್. ಶಿವಾನಂದನ್, ವೈಶಾಖ್, ವಿ.ಆರ್. ಮಂಜುನಾಥ್, ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.