ಗೋಣಿಕೊಪ್ಪ ವರದಿ, ಆ. 13: ಲಯನ್ಸ್ ಸಂಸ್ಥೆಯ ಲಯನ್ಸ್ ಜಿಲ್ಲಾ 317ಡಿ ಪ್ರಾಂತೀಯ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಪ್ರಾಂತೀಯ ಅಧ್ಯಕ್ಷರಾಗಿ ಪಾರುವಂಗಡ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷರಾಗಿ ಡಾ. ಮಚ್ಚಮಾಡ ಸೂರಜ್ ಉತ್ತಪ್ಪ, ಜಿಲ್ಲಾ ಸಂಪರ್ಕ ಅಧಿಕಾರಿಯಾಗಿ ಪಟ್ಟಡ ಧನು ಉತ್ತಯ್ಯ, ಮಾಚಿಮಾಡ ಲವ ಗಣಪತಿ, ಸೇವಾ ಕಾರ್ಯಗಳ ಸಂಯೋಜಕರಾಗಿ ಮನ್ನಕಮನೆ ಬಾಲಕೃಷ್ಣ, ಅಂತರಾಷ್ಟ್ರೀಯ ಕಾರ್ಯಕ್ರಮಗಳ ಉಸ್ತುವಾರಿಯಾಗಿ ಅಲ್ಲುಮಾಡ ಸುನಿಲ್ ಆಯ್ಕೆಯಾಗಿದ್ದಾರೆ.