ಕುಶಾಲನಗರ, ಆ, 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಶ್ರಮದಾನ ನಡೆಯಿತು. ವಲಯದ ಎ ಕಾರ್ಯಕ್ಷೇತ್ರ ಬಿ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಶ್ರೀ ಕೋಣ ಮಾರಿಯಮ್ಮ ದೇವಾಲಯ ಆವರಣದಲ್ಲಿ ಶ್ರಮದಾನ ಮೂಲಕ ಸ್ವಚ್ಚತೆ ನಡೆಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಎಂ. ಮಧುಸೂದನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕೋಣಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಚೆಲುವರಾಜು, ಮುಳ್ಳುಸೋಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಸ್. ಶಿವಾನಂದ, ಒಕ್ಕೂಡದ ಅಧ್ಯಕ್ಷೆ ಪದ್ಮಾವತಿ ಪರಮೇಶ್, ಕಾರ್ಯದರ್ಶಿ ಪ್ರಿಯಾ, ಸದಸ್ಯರಾದ ಪಾರ್ವತಿ, ಬಿಂಧು, ಸಂಧ್ಯಾ, ಸೇವಾ ಪ್ರತಿನಿಧಿ ಯಶೋಧ, ಡಿಎಸ್‍ಎಸ್ ಪ್ರಮುಖರಾದ ರಾಜು ಇದ್ದರು.