ಗೋಣಿಕೊಪ್ಪ ವರದಿ, ಆ. 13 : ಪೊನ್ನಂಪೇಟೆ ಜೆಸಿಐ ನಿಸರ್ಗ ವತಿಯಿಂದ ಬಿಟ್ಟಂಗಾಲದ ಮೇ. ಜ. (ನಿ) ಕುಪ್ಪಂಡ ನಂಜಪ್ಪ ಅವರ ಗದ್ದೆಯಲ್ಲಿ ನಡೆದ 6 ನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ಫುಟ್‍ಬಾಲ್, ಓಟ ಸ್ಪರ್ಧೆ ಗಮನ ಸೆಳೆಯಿತು.

ಮಹಿಳೆಯರ ಹಗ್ಗಜಗ್ಗಾಟದಲ್ಲಿ ಸುಮಾರು 55 ನಿಮಿಷಗಳ ಕಾಲ ಹಗ್ಗಜಗ್ಗಾಟದಲ್ಲಿ ಬಲಾಬಲ ಪ್ರದರ್ಶಿಸಿ ಮಹಿಳೆಯರು ಇತಿಹಾಸ ನಿರ್ಮಿಸಿದರು.

ಸುಜಿ ಫ್ರೆಂಡ್ಸ್ ತಂಡ ಹಾಗೂ ಬಿಟ್ಟಂಗಾಲದ ಪ್ರೇಮಾ ಫ್ರೆಂಡ್ಸ್ ತಂಡವು 55 ನಿಮಿಷಗಳ ಕಾಲ ಏಕಕಾಲದಲ್ಲಿ ಸೋಲೊಪ್ಪಿಕೊಳ್ಳದೆ ಬಲಾಬಲ ಪ್ರದರ್ಶನ ನೀಡಿತು. ಈ ಸ್ಪರ್ಧೆಯಲ್ಲಿ ಗೆಲುವು ಪಡೆದ ಸುಜಿ ಫ್ರೆಂಡ್ಸ್ ತಂಡ ಮಹಿಳಾ ಹಗ್ಗಜಗ್ಗಾಟ ಫೈನಲ್‍ನಲ್ಲಿ ಮರಗೋಡು ಫ್ರೆಂಡ್ಸ್ ವಿರುದ್ದ ಸೋತು ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಮರಗೋಡು ಫ್ರೆಂಡ್ಸ್ ಚಾಂಪಿಯನ್, ಸುಜಿ ತಂಡ ರನ್ನರ್ ಅಪ್ ಸ್ಥಾನ ಅಲಂಕರಿಸಿತು.

ಮಹಿಳಾ ಹಗ್ಗಜಗ್ಗಾಟದಲ್ಲಿ ಸುಮಾರು 6 ತಂಡಗಳು ಪಾಲ್ಗೊಂಡಿದ್ದವು. ಪುರುಷರ ಹಗ್ಗಜಗ್ಗಾಟದಲ್ಲಿ ಮದೆನಾಡುವಿನ ಕಾಫಿ ಲಿಂಕ್ಸ್ ಎ ಮತ್ತು ಬಿ ತಂಡ ಪ್ರಶಸ್ತಿ ಗಿಟ್ಟಿಸಿಕೊಂಡರು. 9 ತಂಡಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಕಾಫಿ ಲಿಂಕ್ಸ್ ಎ ತಂಡ ಚಾಂಪಿಯನ್, ಕಾಫಿ ಲಿಂಕ್ಸ್ ಬಿ. ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.

ಪುರುಷರಿಗೆ ನಡೆದ ಫುಟ್‍ಬಾಲ್ ಕ್ರೀಡೆಯಲ್ಲಿ ಕುಂಜಿಲ ಲಕ್ಕಿ ಬಾಯ್ಸ್ ಚಾಂಪಿಯನ್, ಸಿಟಿ ಬ್ರದರ್ಸ್ ರನ್ನರ್ ಅಪ್ ಸ್ಥಾನ ಪಡೆಯಿತು.

ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಓಟ ಸ್ಪರ್ಧೆ ನಡೆಯಿತು. ( ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ) ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಸ್ವಯಂ, ದೃವ್ ಮುತ್ತಣ್ಣ್ಣ, ಕೀರ್ತನ್ ಗಣಪತಿ, ಬಾಲಕಿಯರಲ್ಲಿ ಜಾನ್ಸಿ ಬೊಳ್ಳಮ್ಮ (ಒಂದೇ ಸ್ಪರ್ಧಿ), ಜೂನಿಯರ್ ಬಾಲಕರಲ್ಲಿ ಮರಗೋಡು ಫ್ರೆಂಡ್ಸ್‍ಪವನ್, ಸುಬ್ರಮಣಿ, ಶಿಬು, ಬಾಲಕಿಯರಲ್ಲಿ ಅಬಿಹಬ್, ಮಾನ್ಯಾ ಮುತ್ತಮ್ಮ, ಪಾರ್ವತಿ, ಪುರುಷರ ವಿಭಾಗದಲ್ಲಿ ಜೀತು, ಲತೀಶ್, ಸಹಬ್, ಮಹಿಳೆಯರಲ್ಲಿ ಗಾಹ್ನವಿ ಬೋಪಣ್ಣ, ಗಾಯನಾ ಬೋಪಣ್ಣ, ಚೈತ್ರಾ ಪೂಜಾರಿ, ಮುಕ್ತ ಪುರುಷರಲ್ಲಿ ಕಾವೇರಿ ಮನೆ ಚಂದ್ರಶೇಖರ್, ಮಂಜುನಾಥ್, ಕುಂಜಿಲ ಸುಲಿ, ಮಹಿಳೆಯರಲ್ಲಿ ಮೂಡಗದ್ದೆ ದಮಯಂತಿ, ರಕ್ಷಿತಾ, ಭವ್ಯ ಚರ್ಮಣ ಪ್ರಶಸ್ತಿ ಪಡೆದರು. 72 ವಯಸ್ಸಿನಲ್ಲಿ ಓಟ ಓಡಿದ ತಾಯಮ್ಮ ಅವರಿಗೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಉದ್ಘಾಟನೆ - ಪ್ರಶಸ್ತಿ ವಿತರಣೆ

ಶಾಸಕ ಕೆ. ಜಿ. ಬೋಪಯ್ಯ ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ದಾನಿಗಳಾದ ಕರ್ತಮಾಡ ದಿಲಿಪ್ ಪೂಣಚ್ಚ, ಬೊಪ್ಪಂಡ ಪಾರ್ವತಿ, ಉದ್ಯಮಿ ಶ್ರೀಧರಣಿ, ಬಿಟ್ಟಂಗಾಲ ಗ್ರಾ. ಪಂ. ಅಧ್ಯಕ್ಷ ಸಾಬಾ ಬೆಳ್ಯಪ್ಪ, ಪೊನ್ನಂಪೇಟೆ ಜೆಸಿಐ ನಿಸರ್ಗ ಅಧ್ಯಕ್ಷ ಮೂಡಗದ್ದೆ ವಿಕ್ರಂ ಉಪಸ್ಥಿರಿದ್ದರು. ಅಂತರಾಷ್ಟ್ರೀಯ ಹಾಕಿ ಆಟಗಾರ್ತಿ ಮಲ್ಲಮಾಡ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪದಲ್ಲಿ ದಾನಿಗಳಾದ ಪ್ರೇಮ್ ಕೊಹ್ಲಿ, ಮೂಡಗದ್ದೆ ರಾಮಕೃಷ್ಣ, ಬೆಲ್ಲತಂಡ ಸ್ವಾತಿ ಕಿರಣ್, ಪೊನ್ನಕಚ್ಚಿರ ಶುಭಾಶ್, ಕಂಜಿತಂಡ ಗಿಣಿ ಮೊಣ್ಣಪ್ಪ, ಬೊಪ್ಪಂಡ ವಸಂತ್, ಕ್ರೀಡಾಕೂಟ ಸಂಯೋಜಕ ಸಿಂಗಿ ಸತೀಶ್, ಜೆಸಿಐ ನಿಸರ್ಗ ಪ್ರ. ಕಾರ್ಯದರ್ಶಿ ಮೂಡಗದ್ದೆ ವಿನೋದ್ ಬಹುಮಾನ ವಿತರಿಸಿದರು.

ತಾಂತ್ರಿಕ ವರ್ಗದಲ್ಲಿ ಮೂಡಗದ್ದೆ ಸುಮನ್, ಶೀಲಾ ಬೋಪಣ್ಣ, ವನೀತ್‍ಕುಮಾರ್, ಮನೋಜ್, ಮಹೇಶ್, ರಾಮದಾಸ್, ಬಿ. ಇ. ಕಿರಣ್, ಮುಕ್ಕಾಟೀರ ಸಂದೀಪ್, ಹೆಚ್. ಆರ್. ಮಧು, ಅರುಣ್, ಅಶ್ವತ್, ಶೇಷಪ್ಪ, ವಿಜು ಕಾರ್ಯನಿರ್ವಹಿಸಿದರು. ಪದಾಧಿಕಾರಿಗಳಾದ ಸರ್ಪುದ್ದೀನ್, ಸುರೇಶ್, ಪ್ರೀತಂ, ವಿನೋದ್, ಸ್ವಾಮಿ, ಮಹರೂಫ್, ಧನಂಜಯ, ಗಿರೀಶ್ ಕ್ರೀಡಾಕೂಟ ನಡೆಸಿಕೊಟ್ಟರು. -ವರದಿ :ಸುದ್ದಿಪುತ್ರ