ಮಡಿಕೇರಿ, ಆ. 12: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್‍ಫೇರ್ ಸೆಂಟರ್‍ನ ವತಿಯಿಂದ ತಾ. 11 ರಂದು ಕೊಡವ ಸಮಾಜದಲ್ಲಿ ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದವರನ್ನು ಒಳಗೊಂಡಂತೆ ಒತ್ತೊರ್ಮೆ ಕೂಟ ಏರ್ಪಡಿಸಲಾಗಿತ್ತು.
ಇದೇ ಪ್ರಥಮ ಬಾರಿಗೆ ನಡೆದ ಕೌಟುಂಬಿಕ ಸಂತೋಷ ಕೂಟದಲ್ಲಿ ಸದಸ್ಯರು ಮತ್ತು ಕುಟುಂಬ ವರ್ಗದವರು ಸಂಭ್ರಮದಿಂದ ಭಾಗಿಗಳಾಗಿದ್ದರು. ಈ ಸಂದರ್ಭ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ವೈವಿಧ್ಯಮಯ ಸ್ಪರ್ಧೆಗಳು ನೆರೆದಿದ್ದವರಿಗೆ ಮುದ ನೀಡಿತು.
ವೆಲ್‍ಫೇರ್ ಸೆಂಟರ್‍ನ ಅಧ್ಯಕ್ಷ ಮುಂಡಂಡ ಎಂ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ಪರ್ಧೆಯ ಬಳಿಕ ವಿಜೇತರಿಗೆ ಬಹುಮಾನ ವಿತರಣೆ, ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಅಧ್ಯಕ್ಷ ಮುಂಡಂಡ ಸೋಮಣ್ಣ, ಸಂಘದ ಉಪಾಧ್ಯಕ್ಷ ಬಲ್ಯಂಡ ಪ್ರಕಾಶ್, ಕಾರ್ಯದರ್ಶಿ ಚೆರ್‍ಮಂದಂಡ ಮಣಿ ಪೊನ್ನಪ್ಪ, ಖಜಾಂಚಿ ಮುಂಡಂಡ ಗಾಂಧಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.